ಮುನಿಸು
ರಚನೆ : ಗಾಯತ್ರಿ ಆರ್
----------------------------------
ಸಣ್ಣ ಸಣ್ಣ ತಪ್ಪಿಗೊಂದು ನನ್ನ ನಿನ್ನ ಮನಸು ಮುರಿದು ಹಿಂದೆ ಮುಂದೆ ದಾರಿ ತಪ್ಪಿ ಎಲ್ಲಿ ಓಡುವೆ, ನಾ ಬರೆನು ಹಿಂದೆಯೇ! ಚಿಕ್ಕ ಪುಟ್ಟು ಕಲಹ ಕಟ್ಟಿ ದೊಡ್ಡ ದೊಡ್ಡ ಕೋಪ ಮೆರೆಸಿ ದೂರ ದೂರ ಸರಿದು ನೀನು ಎಲ್ಲಿ ಹೋಗುವೆ, ನಾ ಬರಲೆ ಹಿಂದೆಯೇ? ನೆನ್ನೆ ಮೊನ್ನೆ ಮುನಿಸು ಕರಿಗಿ ಇಂದು ನಾಳೆ ಕನಸು ನೆನೆದು ಇನ್ನು ನಿನ್ನ ವಿರಹ ಕಳೆದು ಬಾರೆ ಇಲ್ಲಿಗೆ, ಮತ್ತೆ ಬಾಳಿನೊಳಗೆ! ಅತ್ತ ಇತ್ತ ಚಿತ್ತ ಚಲಿಸಿ ಮತ್ತೆ ಮತ್ತೆ ನನ್ನೆ ಗ್ರಹಿಸಿ ಪ್ರೀತಿ ಪ್ರೇಮ ಬರಹ ಬರೆದು ಬಾರೆ ಮೆಲ್ಲಗೆ, ಮತ್ತೆ ಮನಸಿನೊಳಗೆ!
----------------------------------
ನೋಂದಣಿ ಐಡಿ : KPFS2-2406