ಅರಿಯುವಿಕೆ
ರಚನೆ : ಅಶ್ವಿನಿ ಲಿಂಗರಾಜ್ ಶಿರಗುಂಪಿ
----------------------------------
ಅದೊಂದು ಕಾಲವಿತ್ತು ‘ನನ್ನವರು–ತನ್ನವರು’ ಎಂದು; ಇದೊಂದು ಕಾಲವಿದೆ ‘ನಾನು—ನನಗಷ್ಟೇ’ ಎಂದು. ಹಿರಿಯರು–ಕಿರಿಯರು ಒಟ್ಟುಗೂಡಿ ಬಾಳುವ ಆನಂದ, ಪತಿ–ಪತ್ನಿ–ಪುತ್ರರಷ್ಟೇ ರಕ್ತಸಂಬಂಧ. ಅನುವು–ತನುವುಗಳಿಗೆ ಸ್ಪಂದಿಸುವ ಹಿರಿಯ ಜೀವಗಳು, ಯಾವುದೇ ಇರಲಿ, ‘ನನ್ನಷ್ಟಕ್ಕೆ ನಾ’ ಎಂಬ ಮನದ ಇಚ್ಛೆಗಳು. ಸ್ವಾರ್ಥವಿಲ್ಲದ ನಿಸ್ವಾರ್ಥತೆಯ ಒಗ್ಗಟ್ಟಿನ ಒಲವುಗಳು, ಸರದಿಯಲ್ಲಿ ಸ್ವಾರ್ಥತೆಯನ್ನು ಪೂರೈಸಿಕೊಳ್ಳಲು ತುಡಿವ ಮನಸುಗಳು. ಎಲ್ಲಿ ಹೋಯಿತು ಅಂದಿನ ದಿನಗಳ ನಿರಾಳ ಮನಸಿನ ಭಾವನೆಯ ಬದುಕುಗಳು? ಕಣ್ಮರೆಯಾಗಿವೆ ಇಂದಿಗೆ ಜೀವಂತ ಮನಸುಗಳು.
----------------------------------
ನೋಂದಣಿ ಐಡಿ : KPFS2-2405