ಕನ್ನಡ ಸಾಹಿತ್ಯಾಸಕ್ತರಿಗಾಗಿ, ಕವಿತೆಗಳ ಬರವಣಿಗೆಯನ್ನು ಪ್ರೋತ್ಸಾಹಿಸಲು ಕವಿತೆ ಬರೆಯುವ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿದೆ. ಇದು ಯುವ ಕವಿಗಳಿಗೆ, ಹೊಸತಾಗಿ ಕವಿತೆ ಬರೆಯಲು ಪ್ರಾರಂಭಿಸಿದವರಿಗೆ ತಮ್ಮ ಪ್ರತಿಭೆಯನ್ನು ತೋರಿಸಲು ಅತ್ಯುತ್ತಮ ವೇದಿಕೆಯಾಗಿದೆ. ಹೆಚ್ಚಿನ ವಿವರಗಳು ಇಂತಿವೆ: ಈ ಸ್ಪರ್ಧೆಯಲ್ಲಿ ಬಂದ ಎಲ್ಲಾ ಕವನಗಳನ್ನು ವಿಮರ್ಶಾತ್ಮಕವಾಗಿ ವಿಶ್ಲೇಷಿಸಿ, ಬಹುಮಾನಿತ ಕವಿತೆಗಳನ್ನು ಪ್ರತ್ಯೇಕವಾಗಿ ಗುರುತಿಸಲಾಗುತ್ತದೆ. ಈ ವರ್ಷದ ಕನ್ನಡ ಕಾವ್ಯೋತ್ಸವದೊಂದಿಗೆ, ಕವಿತೆಯನ್ನು ಬರೆಯುವುದಷ್ಟೇ ಅಲ್ಲದೆ, ಕವಿತೆಯನ್ನು ವಾಚಿಸುವ ಕಲೆಯನ್ನೂ ಪ್ರೋತ್ಸಾಹಿಸುವ ಉದ್ದೇಶದಿಂದ ನಾವು ಕಾವ್ಯ ವಾಚನ ಸ್ಪರ್ಧೆಯನ್ನು ಆರಂಭಿಸಿದ್ದೇವೆ. ಕವಿತೆಯ ಭಾವ, ಧ್ವನಿ, ಉಚ್ಚಾರಣೆ, ಲಯ ಮತ್ತು ಅಭಿವ್ಯಕ್ತಿಯನ್ನು ನಿಮ್ಮ ವಾಚನದ ಮೂಲಕ ಎಷ್ಟು ಪರಿಣಾಮಕಾರಿಯಾಗಿ ತಲುಪಿಸುತ್ತೀರಿ ಎಂಬುದೇ ಈ ಸ್ಪರ್ಧೆಯ ಮುಖ್ಯ ಉದ್ದೇಶ.ಕವಿತೆ ಬರೆಯುವುದು ಒಂದು ಕಲೆ; ಕವಿತೆಯನ್ನು ಜೀವಂತವಾಗಿ ವಾಚಿಸುವುದು ಮತ್ತೊಂದು ಕಲೆ.

ಕನ್ನಡ ಕಾವ್ಯೋತ್ಸವ 2026 – ಸಂಚಿಕೆ 3 ದರಲ್ಲಿ  ಕವನವನ್ನು ಸಲ್ಲಿಸಲು ಕೊನೆಯ ದಿನಾಂಕ  ನವಂಬರ್ 22, 2026
ಕನ್ನಡ ಕಾವ್ಯೋತ್ಸವದ ಪ್ರೇಕ್ಷಕರ ಆಯ್ಕೆಯ ಪ್ರಶಸ್ತಿಯ ಮತದಾನಕ್ಕಾಗಿ ಕೊನೆಯ ದಿನಾಂಕ:  ನವಂಬರ್ 29  ರಾತ್ರಿ 12 ಗಂಟೆ (IST) ಗೆ ಮುಕ್ತಾಯಗೊಳ್ಳುತ್ತದೆ.

Scroll to Top