ಜೀವನ ಗಾಥೆ
ರಚನೆ : ನಟರಾಜ್.ಎಲ್
----------------------------------
ಜೀವದ ಚಿಂತೆಯ ಆಳ ಬಿಡು ಓ ಘನ ಮನುಜ ಜೀವನ ಸಂತೆಯ ಮಾಳ ನೋಡು ಆ ಮನ ನೀ ನಿಜ ಸಾವಿರಾರು ವಿಧವಿಧ ಫಸಲುಂಟು ನೀಳ ಬಾಂದಳದಿ ಹಿರಿಯರು ಹರಸಿದ ಅಸಲುಂಟು ಬಾಳ ಅಂಗಳದಿ ದಾರಿಯೇ ಕಡಲು ಮನವೇ ಗುಡಿಲು ಭಾವಕೆ ಸ್ಪಂದಿಸು ಧರೆಯೇ ಒಡಲು ಮನೆಯೇ ಮಡಿಲು ದೈವಕೆ ವಂದಿಸು ಸವಕಳಿಯ ಜೀವಕೆ ಧನ್ಯತೆಯೇ ಇಂಧನ ಕಳಕಳಿಯ ಭಾವಕೆ ಮಾನ್ಯತೆಯೇ ಚಂದನ ಪ್ರೀತಿಸುವಾ ಮನಸೆ ಕೊಡುಗೆ ಈ ಬಾಳಿಗೆ ಮುದ್ದಿಸುವಾ ನನಸೆ ಉಡುಗೆ ಆ ನಾಳೆಗೆ ಹುಟ್ಟು ದೇವನು ಹಚ್ಚಿಟ್ಟ ದೀಪದ ಬತ್ತಿ ಸಾವು ಪಾವನ ಕಟ್ಟಿಟ್ಟ ರೂಪದ ಬುತ್ತಿ ಪ್ರೀತಿಯೊಂದೇ ಬೀಜಮಂತ್ರ ಸಂತಸದಿ ಬಾಳಲು ನೀತಿಯೊಂದೇ ರಾಜತಂತ್ರ ಸಂತೈಸುತ ಆಳಲು
----------------------------------
ನೋಂದಣಿ ಐಡಿ : KPFS2-2398