ಪ್ರಕೃತಿ ವಿಸ್ಮಯ
ರಚನೆ : ಅನುರಾಧ ಉದಯ್
----------------------------------
ಜೀವಜಂತುಗಳ ಜೀವರಾಶಿಯ ಜಗತ್ತಿನಲ್ಲಿ ಬದುಕು ಸವೆಸುವ ಕಾಲಚಕ್ರದ ಪ್ರಕೃತಿಯಲ್ಲಿ ಆಳ ಅರಿಯದ ದೂರ ತೀರದ ವಿಸ್ಮಯ ಸಾಗರ ನೋಟಕೆ ಮೀರಿದ ಬಾನಂಚಿನ ಮುಗಿಲೆತ್ತರ ಹೊಳೆ ನದಿ ಬೆಟ್ಟಗುಡ್ಡಗಳ ಶಿಖರದೆತ್ತರ ಸೋಜಿಗ ಹರಿವ ನೀರಿನ ಕಲ್ಲುಗುಂಡಿಯ ಮೂಕ ವಿಸ್ಮಿತ ಕೌತುಕ ಸುತ್ತಮುತ್ತಲು ಹಸಿರು ಅಂಚಿನ ಸುಂದರತೆಯ ಕಾಡು ಸೌಂದರ್ಯ ಧರಣಿ ವೈವಿಧ್ಯತೆಯ ಚೆಲುವ ನಾಡು ಭೂತಾಯಿ ಮಡಿಲಲಿ ಬದುಕಿ ಬಾಳುವ ಹೇ ಮನುಜನೆ ಪರಿಸರ ಸುಂದರತೆಯ ಉಳಿಸು ನೀನು ಕೈ ಜೋಡಿಸುವೆನೆ ದೇವ ಸೃಷ್ಟಿಯಲ್ಲಿ ಪ್ರಾಣಿಪಕ್ಷಿ ಸಂಕುಲ ಸಂತತಿ ಹಸಿರು ಬೆಳೆಸಿ ಉಸಿರ ಉಳಿಸಿ ಸಂರಕ್ಷಿಸಿ ತಡೆ ಅವನತಿ ರವಿ ಚುಕ್ಕಿ ಚಂದ್ರಮ ಆಗಸ ಅಂದ ಪದ ವರ್ಣಿಸಲಾರೆ ... ಋತುಮಾನ ಚಕ್ರದ ಚಂದ ಕೈಗೆಟುಕದೆ ಬಣ್ಣಿಸಲಾರೆ...
----------------------------------
ನೋಂದಣಿ ಐಡಿ : KPFS2-2394