Submission 7448

ಮಳೆ ವಿನಂತಿ

ರಚನೆ : ಜ್ಯೋತಿ ಮಾ ಮೂಲಿಮನಿ

----------------------------------

ಬಾರಯ್ಯ ಮಳೆರಾಯ ಈ ಭೂಮಿಗಿಂದು ಬತ್ತಿದೆದೆಯಲಿ ಬಿತ್ತು ಮಳೆ ಹನಿಯ ಬಿಂದು ಇಳಿಮುಖಗೊಳ್ಳದೆಲೆ ಭಾಸ್ಕರನ ಕೋಪ ತಡೆಯಲಾಗುತಲಿಲ್ಲ ಅವನೊಡಲ ತಾಪ ಬಾಯಾರಿ ಕುಂತಾಳ ಭೂತಾಯಿ ಪಾಪ ದಯಮಾಡಿ ಕೃಪೆ ದೋರು ಈ ಭೂಮಿಗೆ ಸ್ವಲ್ಪ ಬದುಕಲಾಗದೆ ತಾನು ಹಸಿರೆಲೆಯ ಚಿಗುರು ಮಡಿದು ಮರೆಯಾಗುತಲಿಹುದು ಧರೆಯೊಡಲ ಹಸಿರು ಹಾರಿಹೋಗುತಲಿಹುದು ಕೆಸರೊಳಗಿನುಸಿರು ಹೇ ವರುಣದೇವನೇ ಉಳಿಸುಸಿರ ಹೆಸರು ವಸುಂಧರೆಯ ನಗುವಿಗೆ ಕಾರಣನೇ ನೀನು ಈ ನಿನ್ನ ಬಿಗುಮಾನ ತರವಾದುದೇನು ಸಾಕು ಸಾಕಿನ್ನು ವರವಾಗು ನೀನು ಹರಸಿ ಹಾರೈಸುತ ಸುರಿಸು ಶುಭ ಹನಿಗಳನ್ನು..

----------------------------------

ನೋಂದಣಿ ಐಡಿ : KPFS2-2399

0
Votes
80
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top