ಪುರುಷ ಅಂದು ಮಹಿಳೆ ಇಂದು
ರಚನೆ : ಭಾಗ್ಯಶ್ರೀ ವೆಂಕಟೇಶ್ ಮನ್ನಾರಿ
----------------------------------
ಹಳಿದ್ಹಳಿದು ತುಳಿದೆ ಮಹಿಳೆ ಅಬಲೆಯಂದು ತಿಳಿದುಕೋ ಪುರುಷ ಅವಳು ಸಬಲೆ ಇಂದು ||ಪ|| ವಿದ್ಯೆ ಕಲಿಸದೆ ವಂಚಿಸಿ ನಿನ್ನ ಅಂಕೆಯೊಳಿಟ್ಟೆ ಅಂದು ವಿದ್ಯೆ ಕಲಿತ ಹೆಣ್ಣೇ, ಅಂಕಿತವ ಹಾಕುತಿಹಳಿಂದು ||೧|| ದಹದಹಿಸಿ ಪೀಡಿಸಿದೆ ವರದಕ್ಷಿಣೆ ತಾ ಎಂದು ಗಹಗಹಿಸಿ ನಗುತಿಹಳು ವಧು ದಕ್ಷಿಣೆ,ನೀ ನೀಡು ಇಂದು||೨|| ಕುಹಕ ವಾಕ್ಯದಿ ಕುಟುಕಿ ನಿಂದಿಸಿದೆ ಅಂದು ಸಿಹಿ ಬದುಕನೀವೆ ಸುಜನಾಗಿ ಬೇಡುವೆನು ಇಂದು||೩|| ನಿಂತಿಲ್ಲ ಇನ್ನೂ ಅವಳ ಮೇಲೆ ಅನೀತಿ ಅತ್ಯಾಚಾರ ಪ್ರತಿ ಧಾರಾವಾಹಿಯಲೀ ಕೆನ್ನೆಗೆ ಹೊಡೆಯೋ ರೌದ್ರಾವತಾರ ||೪ || ಹೆಣ್ಣೆಲ್ಲಿ ಪೂಜಿಪಳೋ ಅಲ್ಲಿಯೇ ದೇವನಿರುನಂತೆ ಕಾಣೆ ನಾ ಈ ಸತ್ಯ, ಭೂಲೋಕದಲಿ ಎಲ್ಲಿದೆಯಂತೆ.||೫||
----------------------------------
ನೋಂದಣಿ ಐಡಿ : KPFS2-2366