ಒಮ್ಮೊಮ್ಮೆ
ರಚನೆ : ಎಸ್ ಮಂಜುನಾಥ್
----------------------------------
ಒಮ್ಮೊಮ್ಮೆ ಕೆಟ್ಟ ಜನರ ದೃಷ್ಠಿ ದೇವರ ಆಟದಲ್ಲಿ ಹೊಸ ಸೃಷ್ಠಿ ಮಕ್ಕಳಿಲ್ಲವೆಂಬ ಚಿಂತೆಯ ತಾಯಿ ಸಾಲುಮರಗಳ ಬೆಳೆಸಿ ನಿಂತ ತಾಯಿ ಒಮ್ಮೊಮ್ಮೆ ಜೀವನವೇ ಕಷ್ಟ ಧೈರ್ಯದಿ ನಡೆದರೆ ರಾಣಿಯ ಪಟ್ಟ ನಿಸ್ವಾರ್ಥದ ಸೇವೆ ಎಂದಿಗೂ ಅಮರ ಸ್ವಾರ್ಥದ ಸೇವೆ ಎಂದಿಗೂ ಸಮರ. ಒಮ್ಮೊಮ್ಮೆ ಸಾಲುಮರದ ತಿಮ್ಮಕ್ಕನ ಬದುಕು ನೆಮ್ಮದಿಯ ಉಸಿರಾಟಕ್ಕೆ ಪ್ರಶಂಸೆಯ ಮೆಲುಕು ಎಲುಬಿಲ್ಲದ ನಾಲಗೆಗೇನು ಗೊತ್ತು ನೊಂದವರ ಮನ ಮನ ಮಿಡಿಯುವ ಮಾತನಾಡುವವ ದೇವರ ಜನ ‘ಪರಿಸರ ರಾಯಭಾರಿ’ ಯಾದ ಅಕ್ಕ. ‘ಪದ್ಮಶ್ರೀ’ ಪ್ರಶಸ್ತಿ ಗರಿಗೇರಿಸಿದ ತಿಮ್ಮಕ್ಕ.
----------------------------------
ನೋಂದಣಿ ಐಡಿ : KPFS2-2367