ನಿಸರ್ಗದ ಮಡಿಲು
ರಚನೆ : ಗೌತಮಿ ಸಿ. ಎಸ್
----------------------------------
ಸುತ್ತಲು ನೀ ಆವರಿಸಿಕೊಂಡಿರುವೆ... ನಿನ್ನ ನೋಡಲು ಎರಡು ನಯನಗಳು ಸಾಲವು... ಪ್ರತಿ ದಿನ ನನ್ನನ್ನು ಆಕರ್ಷಿಸುವೇ... ನಿನ್ನ ವಿಸ್ಮಯಕ್ಕೆ ನಾ ಸೋತೆನು... ಮೋಡಗಳು ಗುಡುಗಿದಂತೆ ಧರೆಗೆ ಮಳೆ ಸುರಿವೇ ನನ್ನಮ್ಮ ಮಡಿಲಷ್ಟೇ, ನಿನ್ನ ಮಡಿಲು... ಮಗುವಾದೆನು ನಿನ್ನ ಮಡಿಲಲ್ಲಿ... ನಿನ್ನ ಸೌಂದರ್ಯಕ್ಕೆ ನಾ ಮರುಳಾದೆನು... ನಕ್ಕಿ ನಾಚಲೇ, ನೋಡುತ್ತಾ ಮೌನಿಯಾಗಲೇ... ಪ್ರತಿ ಕ್ಷಣ ನನ್ನ ಉಸಿರಿನಲ್ಲಿ, ನೀ ಉಸಿರಾಗಿರುವೇ ಕ್ಷಣ ಕ್ಷಣಕ್ಕೂ ನನ್ನ ಮನ ಸೆಳೆವೇ... ನಿನ್ನನ್ನು ವರ್ಣಿಸಲು ಮುಗಿಯದ ಹಾಳೆಯಿದು... ಪದಗಳೇ ಸಾಲುತ್ತಿಲ್ಲ ನಿನ್ನನ್ನು ವರ್ಣಿಸಲು
----------------------------------
ನೋಂದಣಿ ಐಡಿ : KPFS2-2362