ನಮ್ಮಮ್ಮ ಕನ್ನಡಮ್ಮ
ರಚನೆ : ಮುರಳಿಕೃಷ್ಣ
----------------------------------
ಜನ್ಮವ ನೀಡಿದಳು ನಮ್ಮ ಹೆತ್ತ ತಾಯಿ ಮರು ಜನ್ಮವ ನೀಡಿದಳು ನಮ್ಮ ಕನ್ನಡ ತಾಯಿ ಎದೆ ಹಾಲು ಕುಡಿಸಿದಳು ನಮ್ಮ ಹೆತ್ತ ತಾಯಿ ನುಡಿ ಜೇನು ನೀಡಿದಳು ನಮ್ಮ ಕನ್ನಡ ತಾಯಿ ಹಸಿವಾದಾಗ ನೆನಪಾದಳು ನಮ್ಮ ಹೆತ್ತ ತಾಯಿ ಕಲಿಯುವ ಹಸಿವಾದಳುನಮ್ಮ ಕನ್ನಡ ತಾಯಿ ನಡೆ ನುಡಿ ಕಲಿಸುವಳು ನಮ್ಮ ಹೆತ್ತ ತಾಯಿ ಮುತ್ತಿನಂಥ ನುಡಿಯಾಗುವಳು ನಮ್ಮ ಕನ್ನಡ ತಾಯಿ ಮನೆಯ ಮೊದಲ ಗುರುವಾದಳು ನಮ್ಮ ಹೆತ್ತ ತಾಯಿ ಜ್ಞಾನ ಕಲಿಯುವ ದೇಗುಲವಾದಳು ನಮ್ಮ ಕನ್ನಡ ತಾಯಿ ದೇವರು ನೀಡಿದ ವರವು ನಮ್ಮ ಹೆತ್ತ ತಾಯಿ ದೈವದ ಪ್ರತಿರೂಪವೇ ನಮ್ಮ ಕನ್ನಡ ತಾಯಿ ಆ ದೈವ ಸಮಾನರು ನಮ್ಮೆಲ್ಲರ ಹೆತ್ತ ತಾಯಿ ಆ ದುರ್ಗಾದೇವಿ ಅಂಶವೇ ನಮ್ಮೆಲ್ಲರ ಕನ್ನಡ ತಾಯಿ
----------------------------------
ನೋಂದಣಿ ಐಡಿ : KPFS2-2342