ನೆರಳು ಪರಂಪರೆ
ರಚನೆ : ಕೆ. ಎಲ್.ಶ್ರೀವತ್ಸ
----------------------------------
ನೆರಳುಗಳಿಗೆ ಕಣ್ಣಿಲ್ಲ ಎಳೆದಾಡುತ್ತಲೇ ಸಾಗುತ್ತಿವೆ ಬೆಳಕಿನ ಕಾಲಿಗಂಟಿ ಇಂದಿಗೂ ಬಿಟ್ಟಿಲ್ಲ ನೆರಳುಗಳಿಗೆ ಬಾಯಿಲ್ಲ ಹಾಗಂತ ಸುಮ್ಮನಿಲ್ಲ ರಣಕೇಕೆ ನರ ಬೇಟೆ ಅಬ್ಬರದ ಬರ್ಬರ ನಿಂತಿಲ್ಲ ನೆರಳುಗಳಿಗೆ ಬಣ್ಣವಿಲ್ಲ ಅಂದವರಿಗೆ ತಿಳಿದಿಲ್ಲ ರಕ್ತ ಹೊಗೆ ಹಗೆ ಧಗೆ ಒಳ ಹುನ್ನಾರ ಲೆಕ್ಕವಿಲ್ಲ ಎಲೆಯಿಲ್ಲ ನೆಲೆಯಿಲ್ಲ ಬೇರಿಲ್ಲವಲ್ಲ ಎಂದೆನಿಸಿಲ್ಲ ಸದ್ಯ ನೆರಳಿನ್ನೂ ತಂಪೆರೆವ ಪರಂಪರೆಯ ಮರೆತಿಲ್ಲ
----------------------------------
ನೋಂದಣಿ ಐಡಿ : KPFS2-2341