Submission 7370

ನಮ್ಮ ನಾಡು

ರಚನೆ : ಅಶ್ವಿನಿ ಎ ಎಂ

----------------------------------

ಚಾಮರಾಜನಗರದಿಂದ ಬೀದರ್ ತನಕ ನಿನ್ನ ಸ್ಪರ್ಶ, ಮೈಮರೆಸುವ ನದಿ, ಪರ್ವತಗಳ ನಿನ್ನ ವಾಸ. ಪುಣ್ಯಭೂಮಿ ಎಂದು ಹಾಡುವ ಜನಸ್ತೋಮ, ಕನ್ನಡಿಗರ ಹೃದಯದ ತುಂಬಾ ನಿನ್ನದೇ ಧ್ವನಿಸೋಮ. ವೀರರ ಕೆಚ್ಚೆದೆಯಿಂದ ರಚಿತವಾಯಿತು ನಿನ್ನ ಭೂಮಿ, ಸಾಹಿತ್ಯ ಸಂಗೀತದ ಸುಧೆಯಲ್ಲಿ ನಿನ್ನದೇ ಅಮೃತ ಭೂಮಿ. ವಿಜಯನಗರದ ಹೊನ್ನಿನ ದಿನಗಳ ಬೆಳಕು, ಯುಗಾದಿಯ ಸಂಭ್ರಮದ ನಿನ್ನದೇ ಚಿಲುಮೆ ಬೆಳಕು. ವೀರವನಿತೆಯರ ನಾಡು ನಮ್ಮ ಕರುನಾಡು ಜಗ್ಗದೆ ಕುಗ್ಗದೆ ಜೀವ ಸವೆದ ಪುಣ್ಯವಂತರ ಬೀಡು. ಪ್ರತಿ ಮನಸಲೂ, ಪ್ರತಿ ಉಸಿರಲೂ ಕನ್ನಡಕ್ಕೊಂದು ಬಡಿತವಿರಲಿ!!! ನಿನ್ನ ನುಡಿಯಲಿ ಜೀವದ ನಾದ ಮೊಳಗಲಿ, ಜಯ ಕನ್ನಡ ನಾಡು ಬೆಳಗಲಿ!!!

----------------------------------

ನೋಂದಣಿ ಐಡಿ : KPFS2-2339

0
Votes
82
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top