ಬಿಟ್ಟು ಬಿಡು
ರಚನೆ : ಸುಮಾ ಪ್ರಸನ್ನ ಟೊಂಕದ
----------------------------------
ಅತ್ತಾಗ ಮುದ್ದು ಮಾಡಿ ಬಿದ್ದಾಗ ಎತ್ತಿ ತೀಡಿ ನಕ್ಕಾಗ ನಲಿವ ನೋಡಿ ಇಷ್ಟೇ ಋಣ ತೀರಿತೆಂದು, ಬಿಟ್ಟು ಬಿಡು ಅದನು|| ಹೆತ್ತದ್ದಕ್ಕೆ, ಆಟ ಸುಂಕ, ಕಾಳಜಿಗೆ, ಖುಷಿಯೇ ಬಡ್ಡಿ, ಅಲ್ಲಿಗಷ್ಟೇ ನಮ್ಮ ಬಂಧ, ಬಿಟ್ಟು ಬಿಡು ಅದನು|| ರೆಕ್ಕೆ ಬಲಿತ ಹಕ್ಕಿಯದು, ಗೂಡು ಕಟ್ಟಿ ಮರಿಯ ಮಾಡಿ, ಮತ್ತೆ ಮರಿಯು ಬಾನ ಮುಟ್ಟಲಿ, ಬಾಳ ಚಕ್ರ ಇದುವೇ ಎಂದು, ಬಿಟ್ಟು ಬಿಡು ಅದನು|| ಸಮಯ ಮುಪ್ಪು ಅಪ್ಪುವಾಗ ಖಾಲಿ ಕೈಲಿ ಹೋಗುವಾಗ ಮಮಕಾರದ ಭಾರವೇಕೆ? ಬಿಟ್ಟು ಬಿಡು ಅದನು||
----------------------------------
ನೋಂದಣಿ ಐಡಿ : KPFS2-2323