Submission 7348

ನನ್ನ ಗೆಲುವೆ ಅಮ್ಮಾ! ನನ್ನ ಜಾಗವೆ ಅಮ್ಮ!

ರಚನೆ : ರಾಧಿಕಾ ಎನ್

----------------------------------

ಏಕೆ ಮೂಕಳಾಗಿ ನಿಂತೆ, ನನ್ನ ಬಾಳ ಹಿಂದೆ ಹಿಂದೆ ನಾ ಹೋಗವ ಹಾದಿಯಲ್ಲಿ, ನೀ ಹಾಸಿದೆ ಹೂವ ಚೆಲ್ಲಿ ನಾ ಕಾಣದ ಕನಸನೆಲ್ಲ, ನೀ ನನಸು ಮಾಡಿ ಎಲ್ಲಾ ದೂರ ನಿಂತೆ, ಬೆನ್ನ ಹಿಂದೆ, ಹೀಗೇಕೆ ಮೌನದಿ? ಪ್ರತಿ ಸಂತೋಷ ಮನದಲಿ! ಅಮ್ಮಾ ನನ್ನ ಅಮ್ಮಾ! ನನ್ನ ಒಲವೆ ಅಮ್ಮಾ! ನನ್ನ ಬಲವೆ ಅಮ್ಮಾ! ದೈವ ತಂದ ವರವು ನೀನೆ, ಜೀವ ಬಂಧು ಸಖಿಯು ನೀನೆ ಪ್ರಗತಿ ಪಥದಿ ನಡೆಸಿ, ಪ್ರೋತ್ಸಾಹದ ಹೊನಲು ಹರಿಸಿ ನಾ ಗೆದ್ದರೆ ಉಲ್ಲಾಸವೇನು, ನಾ ಸೋತರೂ ಧೈರ್ಯ ನೀನು ದೂರ ನಿಂತೆ, ಬೆನ್ನ ಹಿಂದೆ ಭಾವ ಕಲಿಸುತ, ಎಲ್ಲಾ ನೋವ ಮರೆಸುತ ಅಮ್ಮಾ ನನ್ನ ಅಮ್ಮ! ನನ್ನ ಗೆಲುವೆ ಅಮ್ಮ! ನನ್ನ ಜಾಗವೆ ಅಮ್ಮ!

----------------------------------

ನೋಂದಣಿ ಐಡಿ : KPFS2-2325

0
Votes
117
Views
11 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top