ಸಿರಿ ಕನ್ನಡ
ರಚನೆ : ಕೆ. ಸುಂದರ್ ಸಂಪಾಜೆ
----------------------------------
ಕನ್ನಡ ಸಿರಿಗನ್ನಡ ನಡೆ ಕನ್ನಡ ನುಡಿ ಕನ್ನಡ ಜನಮನ ದನಿಯಲಿ ದುಡಿಯುವ ಬೆವರಲಿ ಕನ್ನಡ ಧಮನಿ ಧಮನಿಯಲಿ ಹರಿಯುವ ನೆತ್ತರು ಕನ್ನಡ ||ಪ|| ನಮ್ಮ ನಾಡು ಒಂದೇ ಕನ್ನಡ, ನಮ್ಮ ಬೀಡು ಒಂದೇ ಕನ್ನಡ , ನಮ್ಮ ನಡೆಯು ಒಂದೇ ಕನ್ನಡ ಕನ್ನಡ ನಮ್ಮ ನೆಲವು ಒಂದೇ ಕನ್ನಡ, ನಮ್ಮ ಜಲವು ಒಂದೇ ಕನ್ನಡ, ನಮ್ಮುಸಿರು ಒಂದೇ ಕನ್ನಡ ಕನ್ನಡ ||ಸಿರಿ|| ಕಾವೇರಿ ನದಿಯೆ ಉಸಿರು ನಮಗಿಂದು ಹಚ್ಚಹಸಿರಿನ ಉಸಿರೆ ಎಂದೆಂದೂ ಆ ರೈತನ ಬೆವರಲಿ ಕನ್ನಡ , ಅವ ಬೆಳೆದ ಬೆಳೆಯಲಿ ಕನ್ನಡ ಆ ಅನ್ನವನುಂಡ ನಾವೇ ಧನ್ಯರು, ಈ ಮಣ್ಣಲಿ ಹುಟ್ಟಿದ ನಾವೇ ಧನ್ಯರು||ಪ||
----------------------------------
ನೋಂದಣಿ ಐಡಿ : KPFS2-2322