Submission 7342

ಅಂತರ

ರಚನೆ : ಬಿಂದು ಬಿ.ಕೆ

----------------------------------

ನನ್ನದು ಮಳೆಗಾಡಿನ ಊರಾದರೇನು ನಿನ್ನ ಮನೆಯಂಗಳದ ಚಪ್ಪರದ ಕೆಳಗಿನ ಆ ತಂಪು ನನ್ನೀ ಎದೆಯ ತುಂಬೀತೆ! ಚಪ್ಪರದ ಕೆಳಗಿನ ಚಿತ್ತಾರದ ನೆರಳುಗಳಿಗೆ ನಾನಿಲ್ಲಿ ಬಿಡಿಸಿದ ರಂಗೋಲಿ ಸಾಟಿಯಾದೀತೆ! ಎತ್ತರದ ನೀಲಾಂಬರ ಕೆಂಬಣ್ಣದ ನೆಲವನ್ನು ಯಾವುದೋ ಅಂಚಿನಲ್ಲಿ ಸಂಧಿಸಿದೆ ಎನ್ನುವ ಭ್ರಮೆಯೇ ಇಲ್ಲಿ ರೂಪಕ. ಹೀಗೆ ಉತ್ತುಂಗಕ್ಕೇರಿದ ನಿನ್ನ ಯಾವ ಭಾವವನ್ನು ನಾನು ನಿಜಕ್ಕೂ ದಕ್ಕಿಸಿಕೊಳ್ಳಲಾಗದಷ್ಟು ಪಾತಾಳಕ್ಕಿಳಿದಿದ್ದೀನೆಯೇ? ಅಲ್ಲಾ! ಪ್ರೇಮದ ಆಳಕ್ಕಿಳಿದಿದ್ದೀನಿ, ನನ್ನದೇ ಒಂದಿಷ್ಟು ಕುದಿಯುವ ಪ್ರೇಮಾಗ್ನಿಯ ತುಮುಲಗಳು ನಿನ್ನೊಡಲ ತುಂಬಿ ಉಕ್ಕಿ ಜ್ವಾಲೆಯಾಗಿ ಸ್ಫೋಟಿಸಬೇಕಿದೆ ಅಷ್ಟೇ.

----------------------------------

ನೋಂದಣಿ ಐಡಿ : KPFS2-2321

0
Votes
80
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top