Submission 7340

ಸೌಂದರ್ಯವತಿ

ರಚನೆ : ಸರೋಜ ಬಸವರಾಜ್

----------------------------------

ಮುಂಗೋಪಿ ಹೆಣ್ಣಿಗೆ ಮೂಗುತಿ ಶೃಂಗಾರ ಚಂಚಲಾವತಿಗೆ ಕಾಲುಂಗರವೇ ಅಂಗಾರ ಹೆಣ್ಣಿನ ಮಾನ ಉಳಿಸಲು ಮಾಂಗಲ್ಯ ಮಂದಾರ ಅವಳ ಗೆಜ್ಜೆಯ ನಾದ ಎನ್ನ ಕರ್ಣಗಳಿಗೆ ಮಧುರ ಅದೇ ಇರಬೇಕು ಅವಳ ಚೆಲುವಿನ ಗುಟ್ಟು ಹುಬ್ಬುಗಳ ನಡುವೆ ಇಟ್ಟ ಆ ಚುಕ್ಕಿ ಬೊಟ್ಟು ನಡೆದು ಬಂದಳು ಹಸಿರು ಸೀರೆ ಗಾಜಿನ ಬಳೆ ತೊಟ್ಟು ಮಾಯವಾಯಿತು ಆಯಾಸ ದೇಹ ಬಿಟ್ಟು ಪ್ರತಿಯೊಂದನ್ನು ಸಾಧಿಸಬಲ್ಲಳು ಎಲ್ಲದರಲ್ಲೂ ಮುನ್ನುಗ್ಗುವಳು ಹೆಣ್ಣು ಗಂಡಿಗೆ ಸಮಾನ ಎಂದು ಅಸಮಾನತೆಯನ್ನು ತೊರೆದವಳು ಹೆಣ್ಣು ಹುಟ್ಟಿತೆಂದು ದರಿದ್ರ ಅನಬೇಡ ಹೆಣ್ಣಿಂದಲೇ ನಿನ್ನ ಮನೆ ಬೆಳಗುತ್ತಿರುವುದು ಮರೆಯಬೇಡ..

----------------------------------

ನೋಂದಣಿ ಐಡಿ : KPFS2-2319

0
Votes
80
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top