Submission 7332

ನನ್ನವಳ ಪರಿಚಯ...!

ರಚನೆ : ಶ್ರೀನಿವಾಸ ಕೆ ವಿ

----------------------------------

ಕಂಡೆ ನನ್ನವಳ ಅಂದೆಂದೋ ಒಂದು ದಿನ ಮರೆತೆನು ಜಗವ, ನೋಡಿ ನಾನವಳ ತುಂಟತನ ಅವಳೊಂದು ಅಂದದ ಗಣಿ, ಮುದ್ದಾದ ಹಸಿರು ಗಿಣಿ ಕ್ಷಣದಲ್ಲೆ ಮರೆಯಾದಳು ಆ ಕನ್ಯಾಮಣಿ ಸಿಗಲಿಲ್ಲ ಅವಳ ಸುಳಿವು ಕೇಳಿದರೂ ಕಣಿ ಬರೆಯುತ್ತಿದ್ದರೆ ನಾ ಕುರಿತು ಅವಳ ಅಂದ ಹುಣ್ಣಿಮೆಯ ಚಂದ್ರನೆ ಕೆಳಗಿಳಿದು ಬಂದ ಬರೆದ ಸಾಲುಗಳಾಯ್ತು ವರ್ಣನೆಗೆ ಕುಂಚ ವರ್ಣಿಸಲು ಬಾಕಿ ಇದೆ ಇನ್ನೂ ಕೊಂಚ ಸಂಧಿಸಿದೆ ಅವಳನ್ನು ನಾ ಮತ್ತೊಂದು ದಿನ ಇಬ್ಬರ ಮೊಗದಲ್ಲೂ, ಏನೊ ತಿಳಿಯದ ಮೌನ ಮೌನವೇ ಮಾತಾದಾಗ, ಮಾತಿಗೆಲ್ಲಿ ಜಾಗ ಮನಸುಗಳು ನಾಚಿದಾಗ, ಕಣ್ಣಲೇ ಅನುರಾಗ ಕಂಗಳು ಕಲೆತಾಯ್ತು, ಮನಸುಗಳು ಬೆರೆತಾಯ್ತು, ಒಲವು ಶುರುವಾಯ್ತು..!

----------------------------------

ನೋಂದಣಿ ಐಡಿ : KPFS2-2314

125
Votes
645
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top