ಸಿಗದ ಉತ್ತರ
ರಚನೆ : ಸೋಮಶೇಖರ ಎನ್
----------------------------------
ಕಾಯುವಿಕೆಗೆ ಸಿಗುವುದೇ ಉತ್ತರ ಇಂದಿಗೂ ನೆನಪಾಗುತ್ತಲೇ ಇರುವುದು ನಾವು ಆಡಿದ ಪ್ರತಿ ಮಾತುಗಳು ಪಕ್ಕದಲ್ಲೇ ಕುಳಿದಂತೆ ಭಾಸವಾಗಿ ಮಾತಾಡಲು ಅರಿವಾಗುವುದು ನೀನಿಲ್ಲವೆಂದು ಮುದ್ದಿಸುತ್ತಲೀ ಕೆನ್ನೆ ಸವರಿಸಿ ಮುತ್ತ ನೀಡಲು ಎಚ್ಚರ ಆಗುವುದು ನಿಜವಲ್ಲವಿದು ಎಂದು ಸೂಕ್ಷ್ಮದೀ ಗದರುವ ಕಾಳಜಿ ಕಂಡು ಅಚ್ಚರಿಗೊಂಡಿದ್ದೆ ಇದೇ ನಿಜದ ಬದುಕೆಂದು ಭಾವನೆಗಳ ಏರಿಳಿತದಲ್ಲಿ ಅನುಭವಿಸುತ್ತಿರುವೆ ನನ್ನ ಬದುಕು ವಾಸ್ತವವೋ, ಕಲ್ಪನೆಯೋ ಎಂದು ದೇವರಲೀ ನಾನು ಕೇಳದೆಯೋ ಕೊಟ್ಟಿದ್ದೆ ಪ್ರೀತಿ ಪ್ರತಿ ಕ್ಷಣವೂ ಹುಡುಕುತಿರುವೆ ಆ ಪ್ರೀತಿಯನು ಇಂದು ಕಲ್ಪನೆಗೂ ಸಿಗುತ್ತಿಲ್ಲ ಉತ್ತರ . . . ಸಿಗದ ಉತ್ತರ ಕಾಯುವಿಕೆಗೆ ಸಿಗುವುದೇ ಉತ್ತರ ||
----------------------------------
ನೋಂದಣಿ ಐಡಿ : KPFS2-2313