Submission 7316

ನೀಲಿ ಸಮುದ್ರ

ರಚನೆ : ಗುರು ಬಸವರಾಜ

----------------------------------

ಕಂಡಷ್ಟು ನಿರಾಳ, ಎದೆಯ ಅಂತರಾಳಕ್ಕಿಳಿಯುವಷ್ಟು ನಿನ್ನೊಂದಿಗಿನ ನೆನಪುಗಳ ಆಳ ಬದುಕಿನಲ್ಲಿ ಬಂದೋದಗಿದ ಅದೆಷ್ಟೋ ಕಹಿ ಘಟನೆಗಳನ್ನ ತೊಳೆದು ಹಾಕುವುದು ನಿನಗದು ತೀರಾ ಸರಳ ಅದೆಂಥ ದುರುಳರ ನೆಮ್ಮದಿಯನ್ನು ಕಲುಕದೆ ಇರಲಾರದು ನಿನ್ನ ಅಲೆಗಳ ಕಲರವ ನೀರಿನಷ್ಟೇ ನಿರಂತರ, ಅಲೆಯಷ್ಟೇ ಆತುರ, ನೀಲಿ ಬಾನಿನಷ್ಟೇ ನಿಷ್ಕಲ್ಮಶ, ಭಾಸ್ಕರನಷ್ಟೇ ಭಯಾನಕ, ಗಾಳಿಯಷ್ಟೇ ಅಸಹಾಯಕ, ಈ ನೀಲಿ ಸಮುದ್ರ

----------------------------------

ನೋಂದಣಿ ಐಡಿ : KPFS2-2300

0
Votes
100
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top