ತಾಯಿಯ ಪ್ರೀತಿ
ರಚನೆ : ಮಂಗಳಾ ಪಿ
----------------------------------
ಓ ತಾಯಿಯೇ, ಅದೆಷ್ಟು ಪ್ರೀತಿಯೇ, ಓ ತಾಯಿಯೇ, ಅದೆಷ್ಟು ಪ್ರೀತಿಯೇ, ಸರಿಸಾಟಿಯಿಲ್ಲವೇ ನಿನ್ನ ಈ ಪ್ರೀತಿಗೆ ತವರಿಗೆ ನಾ ಬಂದಾಗ ನಿನ್ನ ಕಂಗಳಲ್ಲಿ ಕಾಣುವ ಆ ಆನಂದ ಹೊರಟು ನಿಂತಾಗ ಆ ನಿನ್ನ ಕಂಗಳಲ್ಲಿ ಕಾಣುವ ವೇದನೇ... ಮಾಯವಾಹುತಿಹಳು ಮತ್ತೆಂದೂ ಬರುವಳೋ ಮತ್ತೆ ಬರುವವರೆಗೆ ನಾನಿರುವೆನೇ ಓ ದೇವರೇ.....ಹೆಣ್ಣು ಹೆತ್ತ ನನಗೇಕೆ ಈ ಶಿಕ್ಷೆ ನಿನ್ನ ಈ ಮನದಾಳದ ಕೂಗು ನನ್ನನ್ನು ಆವರಿಸಿದರೂ ಮೌನಿಯಾಗಿ ಹೊರಟು ನಿಂತಿರುವೆ ಓ ತಾಯಿಯೇ, ಅದೆಷ್ಟು ಪ್ರೀತಿಯೇ, ಓ ತಾಯಿಯೇ, ಅದೆಷ್ಟು ಪ್ರೀತಿಯೇ
----------------------------------
ನೋಂದಣಿ ಐಡಿ : KPFS2-2298