Submission 7312

ನೀನ್ಯಾರೆ?

ರಚನೆ : ಕುಸುಮಾ ಮಂಜುನಾಥ

----------------------------------

ಮೆತ್ತನೆಯ ಕಿರುನಗೆ , ಹೊಳಪಿನ ಬೀಳ್ಕೊಡುಗೆ , ತುಸುನಗೆಯ ಸೂಸಿ ಚಾಮರದಂತೆ ಸಿಹಿಗಾಳಿ ಬೀಸಿ, ಕಾವೇರಿಯಂತೆ ಕಂಪಿಸಿ ಶ್ರೀಗಂಧದಂತೆ ಸುಗಂಧ ಪರಿಮಳ ಚೆಲ್ಲುವ ಚೆಲುವೆ ನೀನ್ಯಾರೆ? ಪ್ರೀತಿ ಪ್ರೇಮ ವಿಶ್ವಾಸದ ಬದುಕಿಗೆ ಬತ್ತಿ ಹಾಕಿ, ನಂಬಿಕೆಯ ಬೆಳಕಿಗೆ ದೀಪ ಹಚ್ಚಿ ತನುಮನವ ಕೊಳ್ಳೆ ಹೊಡೆದಾಕೆ, ಕದ್ದು ಮುಚ್ಚಿ ಚಿತ್ತ ಮನಸ್ಸದಿ ತಿರುಗಿ ತಿರುಗಿ ನೋಡುವಾಕೆ, ಕನಸ್ಸೆಂಬ ಲೋಕದಲ್ಲಿ ಮೋಡ ಬಿತ್ತನೆ ಮಾಡಿ ಕೃತಕ ಮಳೆ ಬರೆಸಿದಾಕೆ, ಈ ಜೀವಕೆ ಸದಾ ಹಸಿರಾಗಿ ಉಸಿರಾಗಿ ದೂರವಿದ್ದರೂ ಹತ್ತಿರವೇ ಉಳಿದಾಕೆ, ನೀನ್ಯಾರೆ?

----------------------------------

ನೋಂದಣಿ ಐಡಿ : KPFS2-2296

0
Votes
98
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top