Submission 7318

ಮಾತು -ಮಂತ್ರ

ರಚನೆ : ಶ್ರೀಶೈಲ ಆರ್ ಗಣಾಚಾರಿ

----------------------------------

ಕುಹಕದಿಂದಾಡಿದ ಮಾತು ಇರಿಯುವದು ಎದೆಯನ್ನ ಇರಲಿ ನನ್ನವರೆನ್ನುವ ಮನವು ಅರಿಯುವದು ತಿಳಿಯಣ್ಣ ಬಿರುನುಡಿಯ ಬರಸಿಡಿಲು ಧುತ್ತೆಂದಪ್ಪಳಿಸಲು ಕಣ್ಣೀರಕೋಡಿ ಅಳುವತೋರ್ಗೊಡದೆ ನಗೆಚೆಲ್ಲು ದೂರುವರು ದೊರೆಯನ್ನೇ.... ದೇವನನು ಬಿಟ್ಟಿಲ್ಲ ಕಟುಕರಿವರು ಇರಲಿ ದೂರುತ್ತಲವರು ಸ್ವಾನತೆರದಿ ಸಾಗು ನೀ ಮುಂದೆ ದೊರೆಯತೆರದಿ ಜಗದುಂಬಿದೆ ನೂರೆಂಟು ಗಂಟು ಬಿಡಿಸಲು ನಾಯಕ ವಿನಾಯಕನುಂಟು ಮನದಮಲೀನ ತೊಳೆಯಲೇಬೇಕು ಆಗ ಮಾತು ಮಂತ್ರವಾಗಲೇಬೇಕು

----------------------------------

ನೋಂದಣಿ ಐಡಿ : KPFS2-2304

0
Votes
102
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top