ಸಮಾನತೆ?
ರಚನೆ : ವಿಜಯಲಕ್ಷ್ಮಿ ಚಿನಿವಾರ್ ಟಿ.ಎನ್
----------------------------------
ಎಲ್ಲಿದೆ ಸ್ತ್ರೀಯರಿಗೆ ನ್ಯಾಯ ಎಲ್ಲೆಲ್ಲೂ ನಡೆಯುತ್ತಿದೆ ಅನ್ಯಾಯ? ಶೋಷಣೆ ಧೋರಣೆಗೆ ಒಳಗಾಗುವರು ಮೌನದಿ ಬೆಂಕಿಯಲ್ಲಿ ಬೇಯುವರು ಎಲ್ಲೆಲ್ಲೂ ನಡೆಯುತ್ತಿದೆ ಅತ್ಯಾಚಾರ ಇದಕ್ಕೆ ಇಲ್ಲವೇ ಪರಿಹಾರ? ಅಸಮಾನತೆಯ ಪ್ರವಾಹದಲ್ಲಿ ಸಿಲುಕಿರುವಳು! ಸಮಾನತೆಯ ಕನಸುಗಳನ್ನು ಕಾಣುತಿರುವಳು? ಭ್ರೂಣಹತ್ಯೆ ಶಿಶುಹತ್ಯೆ ಮಾಡುತ್ತಿರುವರಿಂದು ಸ್ತ್ರೀ ಪುರುಷ ಸಮಾನತೆ ಎಲ್ಲಿದೆ ಇಂದು? ಕೌಟುಂಬಿಕ ಕಲಹಕ್ಕೆ ಈಡಾದರೂ ಇಂದು ಕುಟುಂಬವೇ ಪ್ರಾಣ ಎಂದು ಬಾಳುತಿಹಳು ಎಂದೆಂದು! ಸಕಲಕೆಲ್ಲಕು ಕಾರಣ ಹೆಣ್ಣು! ಪ್ರಕೃತಿಯಂತೆ ರಕ್ಷಿಸಬೇಕು ಅವಳನ್ನು
----------------------------------
ನೋಂದಣಿ ಐಡಿ : KPFS2-2261