Submission 7272

ಗಂಧರ್ವ ಗಿರಿ

ರಚನೆ : ಟಿ.ರಾಜಲಕ್ಷ್ಮಿ ಶಂಕರ್.ಜಿಂಗಾಡೆ

----------------------------------

ಪ್ರಕೃತಿಯ ಮಡಿಲಲ್ಲಿ ಮಗುವಾಗಿ ನೀ ಬೆಳೆದೆ ಸೌಂದರ್ಯದ ಸೊಭಗಾಗಿ ಮನಸಿರಿಯಲಿ ನೀ ಕಂಡೆ ಥಳುಕುವ ಬಳುಕು ಓಡುವ ನದಿಯಾದೆ ದುಮ್ಮಿಕ್ಕಿ ಹರಿಯುವ ಜಲಧಾರೆ ನೀ ನಾದೆ ಸಹ್ಯಾದ್ರಿಯ ತಪ್ಪಿಲಲ್ಲಿ ಜಿಗಿದಾಡುವ ಜಿಂಕೆಯದೆ ತುಂಗೆಯ ಜೊತೆಯಲ್ಲಿ ಸೇರುವ ಭದ್ರೆಯಾದೆ ಬೆಳದಿಂಗಳ ರಾತ್ರಿಯಲ್ಲಿ ಬೆಳಗುವ ಚಂದಿರನಾದೆ ಬೇಲೂರ ಗುಡಿಯ ಶಿಲಾ ಬಾಲಕಿಯದೆ ಕಾನನದ ಕಸ್ತೂರಿಯಾದೆ ಕಾನನದ ಮಲ್ಲಿಗೆಯದೆ ಬಾನಲ್ಲಿ ಹಾರಾಡುವ ಬೆಳ್ಳಕ್ಕಿಯ ಸಾಲು ಸಾಲೇ ನೀನಾದೆ ಅಂಬರದ ಅಪ್ಸರೆಯದೆ ಬೆಳ್ಳಿ ಮೋಡದ ಬಿತ್ತಾರವಾದೆ ಕಂಗಳ ಕಾಂತಿಯಾದೆ ಕಣ್ಣಿನ ಪ್ರತಿಬಿಂಬವಾದೆ ಕನ್ನಡಾಂಬೆಯ ಮಡಿಲಲ್ಲಿ ಶ್ರೀಗಂಧದ ನಾಡಿನಲ್ಲಿ ಗಂಧರ್ವದ ಗಿರಿಯಲ್ಲಿ ನಲಿ ನಲಿದಾಡುವ ಮಗುವಾದೆ

----------------------------------

ನೋಂದಣಿ ಐಡಿ : KPFS2-2266

0
Votes
84
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top