ಪರಿಸರದಲ್ಲಿ ಚಾರಣ
ರಚನೆ : ವಾಣಿಶ್ರೀ ಡಿ.ಕೆ
----------------------------------
ನಿಸರ್ಗ ಕರೆಯುತ್ತಿತ್ತು ಕೊಟ್ಟು ಆಮಂತ್ರಣ, ಎಲ್ಲೆಲ್ಲೂ ಅಲಂಕರಿಸಿ ಹಸಿರ ತೋರಣ ! ಆ ಪ್ರಕೃತಿಗೆ ಹಚ್ಚ ಹಸಿರೆ ಅಲ್ಲವೇ ಆಭರಣ, ಬಲು ಚೆನ್ನ ಸವಿಯಲು ಆ ವಾತಾವರಣ! ಇದ್ದಾಗ ಸ್ನೇಹಿತರೊಂದಿಗೆ ಪಯಣ, ಮನದಲ್ಲಿ ತುಂಬಿತ್ತು ಖುಷಿಯ ಹೂರಣ! ಸಂತೋಷ ಪಡಲು ಬೇಕಿರಲಿಲ್ಲ ಬೇರೆ ಕಾರಣ, ಹೀಗಿತ್ತು ಪರಿಸರದಲ್ಲಿ, ನಮ್ಮೊದೊಂದು ಚಾರಣ!
----------------------------------
ನೋಂದಣಿ ಐಡಿ : KPFS2-2259