Submission 7252

ಬದಲಾಯಿತು ಊರು, ಬದಲಾಗದೆ ನಾನು

ರಚನೆ : ಸಾಹಿತ್ಯ ಕೊಪ್ಪದ

----------------------------------

ಕಾಲ ಬದಲಾದಂತೆ ಸಮಯದ ಗೊಂಬೆಗಳಾದ ನಾವು ನಮ್ಮತನವನ್ನೇ ಮರೆತೆವು. ಆಟ - ಪಾಠ, ಕಥೆ ಕವನ, ಹರಟೆ, ಮಾತು-ಕಥೆ ಎಲ್ಲವೂ ಮೌನಕ್ಕೆ ತಿರುಗಿ, ಪ್ರತಿಯೊಂದನ್ನು ಲೆಕ್ಕ ಹಾಕುವಂತಾಗಿದೆ. ಅವಿಭಕ್ತ ಕುಟುಂಬ ದಂಪತಿ ಮಕ್ಕಳಿಗೆ ಸೀಮಿತವಾಯಿತು. ಮರೆಯಾದವು ರಸ್ತೆ ಬದಿಗಳಲ್ಲಿ ಕಮಾನು ಕಟ್ಟಿದಮರಗಳು, ಅಲ್ಲಿ ಬಿಲ್ಡಿಂಗಲ್ಡೆ ದರ್ಬಾರು. ಹಕ್ಕಿಗಳ ಚಿಲಿಪಿಲಿ ಕಲರವ ಮಾಯವಾಗಿ, ವಾಹನಗಳ ಕರ್ಕಶ ಶಬ್ದ ಪ್ರಪಂಚವನ್ನೇ ಆಳುತ್ತಿದೆ. ಕಳೆದು ಹೋದ ಹೊಲ ಗದ್ದೆಗಳು, ತಲೆ ಎತ್ತಿದವು ಗಾಜಿನ ಕಟ್ಟಡಗಳು. ಬದಲಾಯಿತು ಊರು, ಬದಲಾಗದೆ ನೆನಪಿನಲ್ಲಿ ನಾನು.

----------------------------------

ನೋಂದಣಿ ಐಡಿ : KPFS2-2242

0
Votes
91
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top