ಕನ್ನಡ ದಾರಿ ಮಾಡಬೇಕಿದೆ ಸೀರೆ
ರಚನೆ : ಗೀತಾಬಾಯಿ. ಎಂ.
----------------------------------
ಕನ್ನಡ ರಾಜ್ಯೋತ್ಸವ ದಂದು ಪ್ರತಿ ಸಾರಿ ನೆನೆದರೆ ಸಾಲದು ಕನ್ನಡ ನಡೆದು ಬಂದ ದಾರಿ ಒಮ್ಮೆ ನೋಡಿ ಕನ್ನಡ ಕದಡಿರುವ ಪರಿ ಬನ್ನಿ ಮಾಡೋಣ ನಾವಿದನ್ನು ಸರಿ ಭಾಷೆ ರಕ್ಷಣೆಗೆ ಬೇಕಿಲ್ಲ ವೇದಿಕೆ ಪ್ರತಿದಿನ ಮಾಡಿ ಇದರ ಬಲಕೆ ಕವಿ ಲೇಖಕನಾಗಿ ಮಾಡಬೇಕಿಲ್ಲ ಸೇವೆ ಸಂಸ್ಕೃತಿ ಸಭ್ಯತೆ ಕಾಯ್ದುಕೊಳ್ಳಬೇಕಿದೆ ನಾವೇ ಬರವಣಿಗೆಯಲ್ಲಿ ಬರಲಿ ಶುದ್ದತೆ ಅದಕ್ಕಿರಲಿ ನಮ್ಮೆಯ ಬದ್ದತೆ ಮಾಡೋಣ ಲೋಪವಿಲ್ಲದ ಉಚ್ಛಾರಣೆ ಪ್ರತಿದಿನವೂ ಇರಲಿ ಇದರ ಆಚರಣೆ ಆಗ ಸಾರ್ಥಕ ನಮ್ಮ ಭಾಷಾಭಿಮಾನ ಕನ್ನಡಕ್ಕೂ ಒದಗುವುದು ಮಾನ ಸನ್ಮಾನ.
----------------------------------
ನೋಂದಣಿ ಐಡಿ : KPFS2-2243