Submission 7250

ಪತ್ರ ಮಾಂತ್ರಿಕ

ರಚನೆ : ಅಮೋಘ ಶಿವಾನಂದ ಮಲಕಣ್ಣವರ

----------------------------------

ಅಂಚೆಗಾರನ ಜೊತೆಯಲಿ ನೋವು ನಲಿವುಗಳ ಆಗಮನ ತಿರುಗೋ ಚಕ್ರಕೆ ಕಾದಿವೆ ಮನಸುಗಳು ಪ್ರತಿದಿನ. ಖಾಕಿ ಉಡುಪ ಧರಿಸಿ ಬರುವ ಪತ್ರಮಾಂತ್ರಿಕ ಹಳ್ಳಿ ಹಾದಿ ನಗರ ಬೀದಿ ನೆನೆಸೋ ಚಾತುರಿಕ ಸೂತಕ ಜಾತಕಗಳ ನಿಭಾಯಿಸೋ ಪರಿಪಾಲಕ ಕಾಣದೂರದ ಮನಸುಗಳ ಬೆಸೆಯೋ ಸೇತುಪಾಲಕ ಮನೆ ಮನಗಳ ಆಗು ಹೋಗುವ ಅರಿತವನು ಕನಸು ನನಸುಗಳ ಕತೆಯ ಹೇಳುವ ಸೂತ್ರದಾರನು ಮುಳ್ಳು ಮಲ್ಲಿಗೆಯ ಹೊತ್ತು ನಟಿಸೋ ಪಾತ್ರದಾರನು ಗತಿಸೋ ಕಾಲಕೆ ಸಾಕ್ಷಿಯಾದ ನಿತ್ಯದೂತನು. ಆಸೆ ಪಾಸೆಗಳ ಮೂಟೆ ಹೊತ್ತು ಚಕ್ರ ತುಳಿಯೋ ಮನುಜ ಇವ ಊರ ಮಂದಿಯ ಕನಸ ಹೊತ್ತು ತಿರುಗೋ ಕಣಜ.

----------------------------------

ನೋಂದಣಿ ಐಡಿ : KPFS2-2239

0
Votes
85
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top