ಗಜಲ್
ರಚನೆ : ಸುರೇಶ ಜಿ ಗುರುಗುಂಟ
----------------------------------
ಭಾವ ಬದಲಿಸಿದರೇನು ಜೀವ ನಿನ್ನ ಸುತ್ತ ಗಿರಕಿ ಹೊಡೆಯುವಾಗ ಬಣ್ಣ ಬದಲಾದರೇನು ಕಣ್ಣು ನಿನ್ನ ಇಣಕಿ ಹುಡುಕ್ಕುತ್ತಿರುವಾಗ ಮಾತು ಮೌನವಾದರೇನು ಹೃದಯದ ಬಡಿತ ನಿನ್ನ ನೆನೆಯುವಾಗ ದಾರಿಯುದ್ದಕ್ಕೂ ಮುಳ್ಳು ತುಂಬಿದ್ದರೇನೂ ನಿನ್ನ ಹೂವಿನ ನಗೆ ನನ್ನ ಕರೆಯುವಾಗ ಬಾಳಿನ ಪಯಣ ಸಾಗದಿದ್ದರೇನು ಪ್ರೀತಿಯಂಬ ಕಡಲ ನಾ ಸೇರಿರುವಾಗ ಕಡಲ ತೆರೆಗಳು ಅಬ್ಬರಿಸಿದರೇನು ಪ್ರೀತಿಯ ನದಿಯಾಗಿ ನಿನ್ನಲ್ಲಿ ನಾ ಸಂಗಮವಾಗಿರುವಾಗ ಪ್ರೇಮದ ಹಸಿವಿನ ದಾಹ ತೀರದಿದ್ದರೇನು ಈ 'ಸೂರಿ'ಯ ನೆನಪಿನ ಬುತ್ತಿ ನಿನ್ನ ಬಳಿಯಿರುವಾಗ ಬಾಳು ಕೊನೆ ಕ್ಷಣದಲ್ಲಿದ್ದರೇನು ನಾನು ನಿನ್ನ ಸೇರಿರುವಾಗ.
----------------------------------
ನೋಂದಣಿ ಐಡಿ : KPFS2-2190