ಶ್ರೇಷ್ಠ ಕನ್ನಡ
ರಚನೆ : ದಿಲೀಪ್. ಎನ್
----------------------------------
ದೇವಲೋಕದಿಂದ ಧರೆಗಿಳಿದ ವಾಗ್ದಾವಿಯು ಕನ್ನಡ ವರ್ಣಮಾಲೆಗಳಾಗಿ, ತಾಯಿ ಭುವನೇಶ್ವರಿಯ ಕೊರಳಹಾರ ಸಿಂಗರಿಸಿರುವಳೆನೋ, ಅಮೃತವ ಕಡೆದು ಕೆನೆತೆಗೆದಂತೆ ಸಿಹಿಯಾದ ಈ ನುಡಿಯು. ಕೇಳಿದರೆ ಕಿವಿಗೆ ಇಂಪಾಗುವುದು, ನುಡಿದರೆ ಅಮ್ಮನ ಎದೆಹಾಲ ಸವಿದಂತೆ ಭಾಸವಾಗುವುದು, ಕನ್ನಡದ ಮಣ್ಣಿನ ಸ್ವರ್ಶವಾದರೂ ಸಾಕೆನಗೆ, ಅಮ್ಮನ ಮಡಿಲಲ್ಲಿ ಇದ್ದಷ್ಟೇ ಖುಷಿಯು, ಹೆತ್ತವಳು ಹೊತ್ತವಳೆಂಬ ಇಬ್ಬರು ಅಮ್ಮಂದಿರ ಮುದ್ದಿನ ಮಕ್ಕಳು ನಾವು ಕನ್ನಡಿಗರು, ಜನ್ಮಜನ್ಮಗಳು ಕಳೆದರು, ಮಾನವನಾದರೂ ಕಡೆಗೊಮ್ಮೆ ಮೃಗವಾದರೂ , ಈ ನನ್ನ ದೇಹವು ಕನ್ನಡದ ನೆಲದಲ್ಲಿಯೇ ಮಣ್ಣಾಗಲಿ ಭಗವಂತ
----------------------------------
ನೋಂದಣಿ ಐಡಿ : KPFS2-2189