ಪ್ರೀತಿ ನೀನೇಕೆ ಹೀಗೆ?
ರಚನೆ : ಭೂಮಿಕಾ ಪಿ
----------------------------------
ಪ್ರೀತಿ ನೀನೇಕೆ ಹೀಗೆ? ನೀನೇಕೆ ಹೀಗೆ? ಗೊತ್ತಿಲ್ಲದೆ ಮನಸಿನಲ್ಲಿ ಹುಟ್ಟುವೆ ಸಿಗದವರನ್ನೆ ಪ್ರೀತಿಸುವೆ ಪ್ರೀತಿ ಹುಟ್ಟಲು ಕ್ಷಣ ಸಾಕಂತೆ ಆದರೆ ನೀ ಸಿಗಲು ಋಣ ಬೇಕಲ್ಲವೆ ಪ್ರೀತಿ ಪಡೆದುಕೊಂಡಾಗ ಜಗವೂ ನಮ್ಮದೆ ಬಿಟ್ಟುಹೋದಾಗ ನರಳಿ ಸಾಯುವೆ ನಿಯತ್ತಿನ ಪ್ರೀತಿಗೆ ಬೆಲೆಯೇ ಇಲ್ಲವೆ? ಅಂದರೆ ಬೇರೆಯವರ ಜೀವನದಲ್ಲಾಡುವ ಆಟವೇ? ಯಾರೊಂದಿಗೊ ಬದುಕು ನಿಶ್ಚಯವಾಗಿದ್ದರೆ ಸಿಗದಿರುವ ಪ್ರೀತಿ ಹುಟ್ಟಿದೇಕೆ? ಇದು ಮೇಲಿರುವವ ಆಡುತ್ತಿರುವ ಆಟವೆ? ಆದರೆ ಜೀವನ ಕಳೆದುಕೊಂಡಿದ್ದು ನನ್ನದಲ್ಲವೆ ಇದನ್ನು ಪ್ರಶ್ನಿಸಲು ಯಾರೂ ಇಲ್ಲವೆ? ಯಾರೂ ಇಲ್ಲವೆ?
----------------------------------
ನೋಂದಣಿ ಐಡಿ : KPFS2-2187