ಮುಟ್ಟದಿರಿ ಮುಟ್ಟಾಗಿಹಳು
ರಚನೆ : ದರ್ಶಿನಿ ಪ್ರಸಾದ್ ವನಗೂರು
----------------------------------
ಮುಟ್ಟದಿರಿ ಈ ಹೆಣ್ಣು ಮುಟ್ಟಾಗಿಹಳು ಸೂತಕದ ಘಳಿಗೆಯಿದು ಮೈಲಿಗೆ ಇವಳು ಹೀಗೊಂದು ಮೌಢ್ಯದಿ ಸರಿಸುವರು ಬದಿಗೆ ಮುಗ್ಧ ಹೆಣ್ಮನಕಿದು ಪ್ರತಿಸಲದ ಬೇಗೆ ಮೈನೆರೆದ ಎಳೆಬಾಲೆ ಪ್ರಾಯ ಹನ್ನೆರೆಡಾಗಿಲ್ಲ ಶಾಲೆಯಂಗಿಯಲಿ ಇಳಿದಿಹ ನೆತ್ತರ ಅರಿವಿಲ್ಲ ಆತಂಕ ಯಾತನೆ ಒಡನೊಡನೆ ನೋವು ಕಣ್ಣು ಕಂಬನಿಯಿಳಿಸಿ ಬಿಕ್ಕುತಿದೆ ಮನವು ಬಲು ಚಿಕ್ಕ ವಯಸಿಗೆ ಋತುಮತಿಯಾಗುವರು ಬಾಲ್ಯವ ಕಸಿಯುತಿದೆ ಹೆಣ್ತನದ ಕೊನರು ಎಲ್ಲರೂಳಗೊಂದಾಗಿ ಬೆರೆವಂತೆ ಸಲಹಿರಿ ಸಂಪ್ರದಾಯದಡಿ ಮುದ್ದು ಕಂದನ ನೂಕದಿರಿ
----------------------------------
ನೋಂದಣಿ ಐಡಿ : KPFS2-2174