Submission 7158

ಮಾತ್ಸರ್ಯ

ರಚನೆ : ಪೂಜಾ.ಪಿ

----------------------------------

ಭಾವದ ಬಂಧನದಲಿ ಬಿಗಿಯಾಗುತಿದೆ ಬಾಂಧವ್ಯ, ಕೊನೆಯೆಲ್ಲಿ ಇಹುದಿಲ್ಲಿ ಎನ್ನುತಿದೆ ಮಾತ್ಸರ್ಯ. ಕಷ್ಟ–ಸುಖಗಳನು ಮರೆಸಿ ಮನದ ಚಿಲಕವ ತೆರೆದರೂ, ಕಿಟಕಿಯಲಿರೋ ಕಂಬಿಗಳು ತೋರಿ ಒಳಬರಲಾಗದೆನ್ನುವರು. ಸವಿನುಡಿಯಲಿ ಹೊಗಳಿಕೆಯ ಹಾರವನು ಪೋಣಿಸುತಲಿ, ಕಪಟನಾಟಕದ ಪಾತ್ರವನು ಮರೆಸುವರಿವರು. ಹೂವಿನ ಹಾದಿಯಲಿ ಮುಳ್ಳನ್ನು ಹಾಸುತಲಿ, ಸವಿಗಾನ ಪ್ರಿಯನಾದದಿ ಪಾಡುವರಿವರು. ಸಂಬಂಧದ ಬಂಧವನು ಬಂಧನವ ಮಾಡುತಲಿ, ಕುಟಿಲತೆಗೆ ಹೊಸ ಹೆಸರನ್ನು ಹುಡುಕುವರಿವರು. ಭೂಮಿಯಡಿ ಹರಿಯುವ ಗುಪ್ತಗಾಮಿನಿಯಂತೆ, ಮನದಿ ಮೂಡುವ ಜ್ವಾಲೆಯನು ಮರೆಮಾಚಿ ನಿಂತತೆ. ಮಾತ್ಸರ್ಯ ಎಂಬುದು ಸಾಮಾನ್ಯ ಪದವಲ್ಲ, ಮನದಿ ಮೂಡುವ ಸಮರ — ಇರುವುದೆಂದೂ ಅಮರ.

----------------------------------

ನೋಂದಣಿ ಐಡಿ : KPFS2-2177

0
Votes
78
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top