ನಮ್ಮ ಬದುಕು
ರಚನೆ : ನಾಗೇಂದ್ರ ಬಾಬು ಎಂ
----------------------------------
ನಮ್ಮ ನಮ್ಮಲ್ಲಿ ನೆಮ್ಮದಿ ಹುಡುಕದೆ ನಗರದ ಕಡೆಗೆ ಬಂದಿಹೆವು. ನಾಗರೀಕತೆಯ ನಾಟಕದೊಳಗೆ ನಮ್ಮ ಪಾತ್ರವ ಸೃಜಿಸಿಹೆವು. ಅದೋ! ಯಾವುದೋ ಭ್ರಾಂತಿಗಳೆಮ್ಮ ಮನೋಭಾವವ ಕದ್ದಿಹವು. ಮನಕೆ ಮುಳ್ಳಾದ ಮನುಜರು ನಾವು ಮಾತಲಿ ಮುತ್ತನು ಬಿತ್ತಿಹೆವು. ಈ ಕಲಿಯುಗದ ಕನಕವಂತರನು ಹುಡುಕುವುದೆಲ್ಲಿ ನೀವ್ಹೇಳಿ. ಕಂಡವರೆಲ್ಲ ಒಂದೊಂದು ಕಡೆಗೆ ಬಾಗಿಕೊಂಡಿರುವರು ಬದುಕಲ್ಲಿ. ಈ ನಮ್ಮ ಬದುಕು ಭವ್ಯವೋ? ತರ ತರ ಬಣ್ಣದ ಭಾರವೋ?
----------------------------------
ನೋಂದಣಿ ಐಡಿ : KPFS2-2152