Submission 7084

ನನ್ನೊಲವಿನ ಚಂದಿರ

ರಚನೆ : ಶ್ವೇತಾ ಕೃಷ್ಣಮೂರ್ತಿ ಕಾರಂತ್

----------------------------------

ಬಂದಿಹನು ಚಂದಿರ ಬಾನ ಅಂಗಳದಲ್ಲಿ ಸುರಿಸುತ ಒಲವಧಾರೆಯ ಸಂತಸದಲ್ಲಿ ಮರೆಮಾಚಲು ಬಂದಿದೆ ಮೋಡದ ದಂಡು ತಂಗಾಳಿ ಬೀಸಿದೆ ನಮ್ಮಿಬ್ಬರ ಕಾತರವ ಕಂಡು ಕಣ್ಣಾಮುಚ್ಚಾಲೆಯು ಸಾಕೆನಸಿ ಬಂದಿಹನು ಪೂರ್ಣಚಂದಿರನಾಗಿ ಕಾಡಿ ಕ್ಷಣಕ್ಷಣಕೊಂದು ಮಾಡುತಿಹನು ಮೋಡಿ ನೋಡುತಾ ನಿಂದೆ ನಾ, ಮುದ್ದು ರೂಪವ ತುಂಬಾ ಕಂಗಳು ತುಂಬಿದೆ ಅವನದೇ ಬಿಂಬ ನಾ ಇಲ್ಲಿ, ಅವನಲ್ಲಿ ನಮ್ಮಿಬ್ಬರದೇ ಮಾತು ಭರದಿ ಸಾಗಿದೆ ಹರಟೆಯು ಜೊತೆಯಲಿ ಕೂತು ಸ್ನೇಹದ ಪರಿಧಿಗೆ ಮನವು ಬೆಸೆದಿದೆ ಪ್ರೀತಿಯ ಸುತ್ತು ಅರಿಯದೆ ಸಾಗಿದೆ ಸಮಯವು ಒಲವನು ಹೊತ್ತು.

----------------------------------

ನೋಂದಣಿ ಐಡಿ : KPFS2-2120

0
Votes
109
Views
11 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top