ಮಾಸಿದ ಬುರ್ಖಾ ಪಿಸಿದೊಗಲಿ..!
ರಚನೆ : ಡಾ.ಮುಮ್ತಾಜ್ ಬೇಗಂ
----------------------------------
ನನ್ನವನಿಗೆ ನಾ ಬೇಡವೆನಿಸಿದರು ಸುತ್ತ ಎತ್ತರದ ಗೋಡೆಗಳ ಸರ್ಪಗಾವಲು, ಕಪ್ಪು ಪರದೆಯ ಹಿಂದೆ ಹೊಳಪು ಸತ್ತ ಕಣ್ಣುಗಳು ಬೇಕಿಲ್ಲದಿದ್ದರು ಬದುಕಿದೆ ಸಮಾಜದಂಕೆಯ ಚೌಕಟ್ಟಿನೊಳು...! ನನ್ನೆದೆಯ ಬೇಗುದಿಯ ದಾಹ ತೀರುವುದಾದರು ಎಂದೂ.. ಅಪ್ಪನ ಗದರಿಕೆಗೆ ಮುದುರಿ ಒಲೆ ಕೆಂಡದ ಮುಂದೆ ಸಣ್ಣ ದನಿಯ ಹಾಡು ಅಮ್ಮಿಯ ಗಂಟಲೊಳಗೆ ಸತ್ತು ನನ್ನೆದೆಯೊಳಗೂ ಆ ಗುನುಗುನು.. ನನ್ನವನಿಗೆ ನಾ ಧ್ವನಿ ಇಲ್ಲದ 'ಜೋರು' ಹುಟ್ಟುವುದೊಂದು ಪ್ರಶ್ನೆ ನನಗೂ, ಮಗಳಿಗೆ ನಾ ಕೊಟ್ಟು ಹೋಗುವುದಾದರೂ ಏನು? ಗರ್ಭದ ಗಾಯಗಳು ಮತ್ತಷ್ಟು ಕಿವು ತುಂಬಿವೆ ಅಮ್ಮಿಹೊತ್ತ ಚಾದರು ನಲುಗಿಸುವುದಾದರೆ ನಖಾಬ, ಮಾಸಿದ ಬುರ್ಖಾ ಪಿಸಿದೊಗಲಿ.!
----------------------------------
ನೋಂದಣಿ ಐಡಿ : KPFS2-2116