ನೊಂದು -ಬೆಂದವರ ಹಾಡು
ರಚನೆ : ಸಿದ್ದರಾಮ ವಿ.ಎಸ್ ನಂಜನಗೂಡು
----------------------------------
ನೋವುಂಡವರ ಕಥನವ ಏನೆಂದು ಬಣ್ಣಿಪಲಿ..? ಬರೆಯಲೇಕೋ ಬೆವರಿಹುದು ಲೇಖನಿಪಿಡಿದ ಕರಗಳು || ಹರಿದ ಅಂಗಿಯ ತೊಟ್ಟವರ ತೊಡಲು ಉಡುಗೆಯೇ ಇಲ್ಲದವರ; ತೊಟ್ಟು ತೊಡದಂತೆ ಅವಮಾನಕ್ಕೀಡಾದವರ ಅರಿಯದಾದೇನ ಅವರ... ನನ್ನವರ..ನನ್ನವರ || ತಿಳಿಯದಾದೆನ ಭಯವ ಪೂಜಿಪ ಜನರ ದಾಸ್ಯದ ಕಾಯಕವೇ ದೈವತ್ವವೆಂದವರ; ಸಾಲುಸಾಲಾಗಿ ಗುಡಿ ಗುಡಾರಗಳ ನಿರ್ಮಿಸಿದವರ... ಗುಡಿಯೊಳು ಅನುಮತಿಯಿಲ್ಲದೆ ಮಣ್ಣಲ್ಲಿ ಮಣ್ಣಾದವರ. ಅರಿಯದಾದೇನ, ನಾ ..... ನನ್ನವರ ||
----------------------------------
ನೋಂದಣಿ ಐಡಿ : KPFS2-2115