ಕನ್ನಡ ನಾಡು
ರಚನೆ : ಹೇಮಲತಾ ಕೆ.ವಿ
----------------------------------
ಅತಿ ಮಧುರ ಕನ್ನಡ ಭಾಷೆ ರಕ್ತದ ಕಣ ಕಣವು ನುಡಿವ ಭಾಷೆ ಉಸಿರಲು ಕನ್ನಡ, ಹಸಿರಲು ಕನ್ನಡ ಬೀಸುವ ಗಾಳಿ, ಹರಿವ ನೀರಿನ ಕಲರವ ಕನ್ನಡ/ ಸುಂದರ ನಮ್ಮ ಕನ್ನಡ ನಾಡು ಹಸಿರು ಹೊದ್ದ ಮಲೆನಾಡು ರಮಣೀಯ ದೃಶ್ಯ ಸೌಂದರ್ಯದ ನಾಡು ನಮಗೆ ಜನ್ಮವಿತ್ತ ತಾಯಿನಾಡು/ ಪುರಾಣ ಪುರುಷರು ಜನಿಸಿದ ನಾಡು ವೀರಾದಿ ವೀರರು ಆಳಿದ ನಾಡು ಪುಣ್ಯ ನದಿಗಳು ಹುಟ್ಟುವ ನಾಡು ತಪಸ್ವಿಗಳು ತಪವಗೈದ ನಾಡು/ ತೆಂಗು ಬೆಳೆವ ಕಲ್ಪತರು ನಾಡು ಕಂಗಿಗೆ ಹೆಸರಾದ ಮಲೆನಾಡು ರನ್ನ, ಪೊನ್ನ, ಪಂಪರು ಹಾಡಿ ಹೊಗಳಿದ ನಾಡು ಶೃಂಗೇರಿ ಶಾರದೆ, ಅನ್ನಪೂರ್ಣೆ ನೆಲೆಸಿರುವ ನಾಡು ಇದುವೇ ನಮ್ಮ ಕನ್ನಡ ನಾಡು
----------------------------------
ನೋಂದಣಿ ಐಡಿ : KPFS2-2121