Submission 7070

ಮೌನ ಮಾತನಾಡಿದಾಗ

ರಚನೆ : ಮೀನಾಕ್ಷಿ ಸಿ ವಿ

----------------------------------

ಮೌನವೇ ಓ ಮೌನವೇ ನಿನ್ನೊಡಲು ಅದೆಷ್ಟು ಶ್ರೀಮಂತ, ನಿನ್ನ ಬಸಿರೊಳಿರುವ ಹಸುಗೂಸು ನಾನು ಆದರೂ ಧೀಮಂತ. ನಿನ್ನೊಳಗಿದೆ ಕಾಮನ ಬಿಲ್ಲನ್ನು ನಾಚಿಸುವ ಬಣ್ಣಗಳು, ಕಚಗುಳಿಯಿಡುವ ಸವಿನೆನಪುಗಳು, ನಿನ್ನೊಳಗೆ ಹುದುಗಿ ಕುಳಿತಿದೆ ಭೋರ್ಗರೆವ ಭಾವಗಳು, ಎಷ್ಟೋ ಸುಂದರ ಸ್ವಪ್ನಗಳು. ಮೌನ ನೀ ಮಾತನಾಡಿದರೆ ಕೈಗೆ ಸಿಗುವುದು ನಕ್ಷತ್ರಗಳು, ನೀ ಸುಮ್ಮನಿದ್ದರೆ ಬೀಳುವುದು ಉಲ್ಕೆಗಳು. ನಿನ್ನೊಂದಿಗಿನ ಪಯಣ, ಚಂದಿರನ ಮಿಲನ, ನಿನ್ನ ಸಹಬಾಳ್ವೆಯದು ಹೃದಯ ಹೃದಯಗಳ ಸ್ಪಂದನ. ಮೌನವನು ಆರಾಧಿಸಿ ಕವನ ಕಾವ್ಯಗಳು ಜನಿಸಲಿ, ಮೌನವನು ಮೀಟಿರೈ ಕಲ್ಲು ವೀಣೆಯಾ ನುಡಿಸಲಿ. ಮೌನದಾ ಅಪ್ಪುಗೆಯಲಿ ಶಿಲ್ಪಗಳು ಮೈದಾಳಲಿ, ಮಾತು ಬೆಳ್ಳಿಯಾದರೆ, ಮೌನವಿದೋ ಬಂಗಾರ. ಓ ಮೌನವೇ, ನಾ ನಿನ್ನ ಸಖಿಯಾಗಿ ನೀ ನನ್ನ ಸಖನಾಗೆ, ಚಿತ್ತಾರದ ಚೆಲುವ ಕಂಡೇ, ವಿಸ್ಮಯದ ಒಲವ ಕಂಡೆ. ನನ್ನೊಳಗಿನ ಗೆಲುವ ಕಂಡೇ, ನನ್ನನೇ ನಾ ಕಂಡುಕೊಂಡೆ, ನನ್ನನೇ ನಾ ಕಂಡು ಕೊಂಡೆ.

----------------------------------

ನೋಂದಣಿ ಐಡಿ : KPFS2-2103

0
Votes
103
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top