ಅವಳೊಂದು ಸಾಗರ
ರಚನೆ : ಉತ್ಪಲ ಬಿ.ಎಂ.
----------------------------------
ಅವಳೊಂದು ಸಾಗರ- ಆಳ ತಿಳಿಯದವಳು! ಅವಳಲ್ಲಿವೆ- ಹಾಯಾದ ಹಡಗಿನ ಸುಂದರ ಯಾನಗಳು! ಅವಳಲ್ಲಿವೆ- ಕೋಪದ ಕಂಪನದ ಭೀಕರ ಸುನಾಮಿಗಳು! ಅವಳೊಂದು ಸಾಗರ- ಆದಿ ಅಂತ್ಯಗಳ ಮೀರಿದವಳು! ತನ್ನೆದೆಯ ಬೇಗುದಿಗೆ ನಿತ್ಯವೂ ಅಲೆಯಾಗುವಳು! ಬತ್ತಿ ಹೋಗುವವರೆಗೆ, ಮುಗಿಲ ಸೇರುವವರೆಗೆ.
----------------------------------
ನೋಂದಣಿ ಐಡಿ : KPFS2-2099