ಕೂರ್ಮಾವತಾರಿ
ರಚನೆ : ರೇಖಾ ಹೆಗಡೆ ಬಾಳೇಸರ
----------------------------------
ಆಗಾಗ ನಾನಾಗುತ್ತೇನೆ ಕೂರ್ಮಾವತಾರಿ ಜಗದ ಉದ್ಧಾರಕ್ಕಲ್ಲ, ನನ್ನ ಉಳಿಸಿಕೊಳ್ಳಲು ಥೇಟ್ ಕೆರೆಯಂಚಿನ ಆಮೆಯಂತೆ ಮಡಚಿ ಒಳಗೆಳೆಯುತ್ತೇನೆ ಕೈಕಾಲು ತಲೆ ಜಗದ ಗದ್ದಲಕೆ ಕದ ಮುಚ್ಚಿ ಮೊರೆ ಹೋಗುತ್ತೇನೆ ಅಂತರಂಗದ ನೆಲೆ ಚಿಪ್ಪಿನೊಳಗಿದೆ ಪುಟ್ಟ ಪ್ರಪಂಚ ಎಣೆಯಿಲ್ಲ ನಸುನಗು ತುಸು ಬೆರಗು ಕೌತುಕಕೆ ಮಿದು ಮಾತು ಹದ ಹುಮ್ಮಸ್ಸು ಆಸೆ ಕನಸುಗಳ ಮಾಯಾ ಹೊದಿಕೆ ಇರಲು ಬೆಚ್ಚನೆಯ ಮೌನದ ಹಿತದಪ್ಪುಗೆ ನಾ ಆತ್ಮಸಖಿ ಈ ಅಂತರ್ಮುಖಿ ಜೀವಕೆ ಜಗ ಓಡುತಿರಲಿ ಮೊಲದ ಗತಿಯಲ್ಲಿ ನಾ ನಿಧಾನ ಬರುವೆ ನನ್ನ ಲಯದಲ್ಲಿ
----------------------------------
ನೋಂದಣಿ ಐಡಿ : KPFS2-2098