ಪ್ರಕೃತಿ ಮಾತೆಯ ವೈಭವ
ರಚನೆ : ನವೀನ್ ಕುಮಾರ್ ಹೆಚ್ ಪಿ
----------------------------------
ತಿಳಿನಿಲ ನಭಧೋಳು ಕಾರ್ಮೋಡ ಸರಿದಂತೆ ಭುವಿಯ ಹಚ್ಚ ಹಸಿರ ಹೊದಿಕೆಯ ಮೇಲೆ ಮಂಜು ಮುಸುಕಿದಂತೆ ಸುರಿವ ಮಳೆ ಬಂದು ಇಳೆ ತಂಪಾದಂತೆ ಬರಿದಾದ ಭುವಿ ಮತ್ತೆ ಹಚ್ಚ ಹಸಿರಾದಂತೆ ಎಲ್ಲಿ ನೋಡೆಂದರಲ್ಲಿ ಮನ ತಲ್ಲಣ ತೀರಿಸಲು ಸಾಧ್ಯವೇ ಈ ಪ್ರಕೃತಿ ಮಾತೆಯ ಋಣ ಚಿಲಿಪಿಲಿ ಹಕ್ಕಿಗಳ ಸುಮಧುರ ಗಾನ ವಿವಿಧ ಪ್ರಾಣಿಗಳ ನಾದದಿಂದ ತಲ್ಲಣಿಸುತ್ತಿದೆ ನನ್ನ ಮನ ಕಲ್ಪನೆಗೂ ನಿಲುಕದಂತಹ ಸೌಂದರ್ಯ ರಮಣಿ ಸಕಲ ಜೀವರಾಶಿಗಳಿಗೂ ಆಸರೆ ಆಗಿರೋ ಜೀವಧಣಿ
----------------------------------
ನೋಂದಣಿ ಐಡಿ : KPFS2-9998