ಕನ್ನಡರನುರಣದೀಪ
ರಚನೆ : ಪ್ರವೀಣ ರಬಕವಿ
----------------------------------
ಹೊತ್ತಿಗೆಗಳ ರಾಶಿಯಲಿ - ರಸಋಷಿಗಳ ಶಾಖೆಯಲಿ; ಹಚ್ಚಿತ್ತೊಂದು ಪ್ರಭೆಯು ಒಲವಿನೋದಿನಲಿ ಹರಿದು.. ಮೈಮನಕ್ಕಿಳಿಯಲೆಲರು ಬೆಳಗುತಕ್ಕರ ಪ್ರಣತಿಯನು- ದೀಪದೊಳಗಣ ವಿಭವ ಪ್ರದೀಪವಾಗಿಸೆ ಮೆರಗಿಸಲು! ಎಲ್ಲರಡರಿದು ವಿದ್ಯೋತ್ ನಾಣ್ಣುಡಿಯ ಜ್ಞಾನಸೊಡರು ಬೆಳಗುತಲಂದದಿ ಸ್ಥಿರವು ಸೌರಾಷ್ಟ್ರ'ಧೀ ಖಂಡದೊಳು! ಉಜ್ವಲಿಸಿ ಹೊಸೆಯ್ಲೊಂದು ಭಾವೈಕ್ಯದೇಕವಿ ಪ್ರಖರವು- ನಲ್ನುಡಿಗಳಡಿ'ಗಡಿ ಆಚೆಯೂ ಅಮರವಿಜ್ಯೋತ್ಸ್ನವು! ನಿತ್ಯ; ಬೆಳಗಲ್ಲೊಂದು ಜ್ಯೋತಿಯು ಇಳೆಯ ಬೆಳಕಂತೆ, ಹೊಳೆಯ್ಲೊಂದು ಕಾಂತಿಯು ಮನದ-ಸಂಪ್ರೀತಿಯಂತೆ, ತಳೆಯ್ಲೊಂದು ಶಾಂತಿಯು ಜಗದ ಸೌಹಾರ್ದ-ದಿಗ್ದಂತೇ ಈ ಸವಿತೆ 'ಕನ್ನಡನಾಡ' ಪ್ರಜ್ವಲಿಸುವ ದೇದೀಪ್ಯವಂತೆ! ಹಚ್ಚೋಣ... ಹಚ್ಚೋಣ... ಹಚ್ಚೋಣ ನಮ್ಮೆಲ್ಲೆಯಸಿರಿ- 'ಭಾರತರಶ್ಮಿ'ಯ ದೀವಿಗೆಯನು - ವಿಶ್ವದೊಳಿಂತೇ....
----------------------------------
ನೋಂದಣಿ ಐಡಿ : KPFS2-9995