ವಿರಹ
ರಚನೆ : ಆಶಾ.ಎಸ್.ಹೆಗ್ಡೆ
----------------------------------
ಆರಿಹೋದ ಬೆಳಕಲ್ಲಿ ಆರದಿರುವ ಗಾಯವು ನೀ ಮಿಡಿದ ಹೃದಯದಲಿ ಮೌನವೇ ಭಾರವು ಅಂಗೈಯ ರೇಖೆಯಲಿ ಅಳಿಸಿರುವ ಹೆಸರಾದೆ ಕಾಗದದ ಕೊನೆಯಲ್ಲಿ ಮರೆತಿರುವ ಸಾಲಾದೆ ಮೂಡಿರದ ಭಾವನೆಗೆ ನೀನಾದೆ ಶಾಹಿಯು ಭರವಸೆಯ ಪದಗಳಲಿ ಬರಿ ಕವಲು ದಾರಿಯು ಹರಿತಾದ ಚೂರಿಯು ಒಲವೆಂದು ಅರಿತಾಗ ಬೊಗಸೆಯಲಿ ಕನಸಿತ್ತು ನೀ ನನ್ನ ತೊರೆದಾಗ ಆರಿಹೋದ ಬೆಳಕಲ್ಲಿ ಆರದಿರುವ ಗಾಯವು ನೀ ಮಿಡಿದ ಹೃದಯದಲಿ ಮೌನವೇ ಭಾರವು!!
----------------------------------
ನೋಂದಣಿ ಐಡಿ : KPFS2-9981