Submission 6894

ಮಸಣದ ಹೂವು

ರಚನೆ : ಪ್ರಶಾಂತ್ ಆರ್

----------------------------------

ಮಸಣದಲ್ಲಿ ಅರಳಿದ ಹೂವಿಗೆ ತನ್ನ ಅಂದದ ಅಂಧತನವಿಲ್ಲ ತನ್ನ ಚಂದದ ಮಂದತನವಿಲ್ಲ ತನ್ನ ಸುಗಂಧದ ಮೈಲಿಗೆಯು ತಾಕಲಿಲ್ಲ ತನ್ನವರ ದುರ್ಗಂಧದಿಂದ ಮೈಲಿಗೂ ಓಡಲಿಲ್ಲ ಮಸಣ ವಾಸಿಯ ಅಭಯಕ್ಕೆ ಸೇರುವುದೊಂದೇ ಅದರ ಬಯಕೆ ಹರನ ಚರಣದಲ್ಲಿ ಮರಣ ಹೊಂದುವುದೊಂದೇ ಅದರ ಸ್ಮರಣ ಹೀಗಿರುವಗ ಕೀಲು ಮೂಳೆ ಇಲ್ಲದ ಮೇಲು ಕೀಳಿನ ಗೀಳ್ ಯಾಕೇ ಎಲೆ ಮಾನವ

----------------------------------

ನೋಂದಣಿ ಐಡಿ : KPFS2-9963

0
Votes
80
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top