Submission 6896

ಈ ಎಲ್ಲಕ್ಕೂ- ಕಾರಣನೂ ?

ರಚನೆ : ರೋಜಾಶ್ರೀ ಎಂ.ಜೆ

----------------------------------

ಅನುಭವವೇ ಕಿಚ್ಚು ಬರೆಯುವಂತ ಹುಚ್ಚು ಹಚ್ಚಿಹನಾರೋ ನಾ ಕಾಣೆನು ಅಳಿದುಳಿದ ನೆನಪಿನಲಿ ಗೀಚುವ ಬರಹದಲ್ಲಿ ಬರೆಯುವಂತ ಸಾಮರ್ಥ್ಯವ ಕೊಟ್ಟಿಹನು ಕಾಣದ ಕೈಗಳಿಗೆ ಶಕ್ತಿಯ ತುಂಬುತ ನಾ ಬರೆವ ಸಾಲಿಗೆ ಸ್ಫೂರ್ತಿಯ ನೀಡುತ ಮನದಿ ಗೀಚಲು ಕಾರಣನು ಮನಕೆ ಬಂದಂತೆ ಗೀಚಿಯೇನು ಒಬ್ಬರ ಮನಕೆ ತಲುಪಲು ಬಂದೆ ಇನ್ಯಾರನ್ನೋ ನೀ ಜೊತೆಗೆ ಕರೆ ತಂದೆ ನೀನಿಡುವ ಲೆಕ್ಕಕ್ಕೆ ಸರಿ-ತಪ್ಪು ಇನ್ನೇಕೆ ಅಪವಾದಿಯೋ - ನಿರಪರಾಧಿಯೋ ನಾನದೇನು

----------------------------------

ನೋಂದಣಿ ಐಡಿ : KPFS2-9965

0
Votes
86
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top