Submission 6884

ನಾನವಳಲ್ಲ

ರಚನೆ : ಚೈತ್ರ ಎಚ್.ಎಂ.

----------------------------------

ಅವರಿವರಂತೆ ಇರುವ ಕರ್ಮ ನನಗಿಲ್ಲ ಅವಳು ಹಾಗಂತೆ,ಇವಳು ಹೀಗಂತೆ,ಕಂತೆಗಳ ಬೊಂತೆ ಹೋ..! ಅವಳು ಲಕ್ಷ್ಮಿಯಂತೆ ಮೈತುಂಬಾ ಒಡವೆಯಂತೆ ನಾನವಳಲ್ಲ ಚಂಚಲೆ, ನೆಲೆಯಿಲ್ಲ ಅವಳಿಗೆ ಇವಳು ದಿಟ್ಟತನದ ಗಟ್ಟಿಗಿತ್ತಿ ದೃಢತೆ ಮನವ ತುಂಬೈತಿ ಅವಳು ಸೀತೆಯಂತೆ...! ಪತಿವ್ರತಾ ಶಿರೋಮಣಿಯಂತೆ ನಾನವಳಲ್ಲ,ರಕ್ಕಸರ ಮೋಸದಾಟವ ಬಲ್ಲವಳು ಅನುಮಾನಿಸಿದವರ ಹುಟ್ಟಡಗಿಸುವವಳು ಇನ್ನು ದ್ರೌಪದಿ..ಮುಗುದೆ ಪಣಕ್ಕಿಟ್ಟ ವಸ್ತು ನಾನವಳಲ್ಲ ಮಾನಕೆ ಅಂಗಾಲಾಚುವವಳು,ಸೀರೆ ಸೆರಗ ತುದಿಯ ಸೋಕಿದವರ ರಕ್ತದೋಕುಳಿ ಹರಿಸುವವಳಿವಳು ನಾನವಳಲ್ಲ ನಾನವಳಲ್ಲ ಅವರಿವರ ಕಾಲ್ತುಳಿತಕ್ಕೆ ಸಿಕ್ಕಿ ನಲುಗುವ ಹೂವು ಇವಳು ತುಳಿದವರ ಕಾಲಿಗೆ ಪಚಕ್ಕನೆ ಚುಚ್ಚಿ ರಕ್ತ ಚಿಮ್ಮಿಸುವ ಮುಳ್ಳು ರಕ್ತ ಚಿಮ್ಮಿಸುವ ಮುಳ್ಳು!

----------------------------------

ನೋಂದಣಿ ಐಡಿ : KPFS2-9955

0
Votes
88
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top