Submission 6882

ಸಾಧುವಿನ ಹಾದಿ

ರಚನೆ : ಟೆಂಟನ್ ಎಂ ಎಸ್

----------------------------------

ಸಾಧುವಿನ ಹಾದಿಗಿಲ್ಲ ನಕ್ಷೆ ಪ್ರತಿಯೊಂದು ತಿರುವೂ ಜೀವನದ ಪರೀಕ್ಷೆ ಅವನಿಗಿಹುದು ಯಾವುದರ ಅಂಟು ತ್ಯಜಿಸಿಹನು ಎಲ್ಲದರ ನಂಟು ಜೊತೆಯಲ್ಲಿ ಹೊರಟಿಹನು ಸಹಯಾತ್ರಿ ಅರಿವಿಲ್ಲದೆ ಜೊತೆಯಲ್ಲಿ ಸವೆಸಬೇಕಾದ ದಾರಿಯ ಖಾತ್ರಿ ಆಗಿರಬಹುದು ಅವನಿಗೆ ಬದುಕಿನ ಮೇಲಿನ ಜಿಗುಪ್ಸೆ ಅವನ ಮನದಲ್ಲಾಗುತ್ತಿರುವುದು ನಿಜಜೀವನದ ಮೀಮಾಂಸೆ ಬೆಂದ ಅನುಭವಗಳು ಸೇರುತ್ತಿರುವವು ಅರಿವಿನ ಬುತ್ತಿ ಬೆಳಕು ಮೂಡಿಹುದು ಅಂಧಕಾರವು ಬತ್ತಿ ಮಸುಕಾಗಿಹುದು ಮನ ಕಂಬನಿದುಂಬಿದ ಕಣ್ಣಿನಂತೆ ಜ್ಞಾನದ ರಶ್ಮಿಯಿಂದ ಕರಗುತಿಹುದು ಅಜ್ಞಾನವು ಇಬ್ಬನಿಯಂತೆ ತಿರುಗಬೇಕಾಗಿದೆ ನಮ್ಮ ಜೀವನು ಸಾಧುವಿನ ಹಾದಿಗೆ ಒದಗಿ ಬರುವ ಅನುಭವಗಳಾಗಲಿ ಭವಿಷ್ಯಕ್ಕೆ ದೀವಿಗೆ

----------------------------------

ನೋಂದಣಿ ಐಡಿ : KPFS2-9954

0
Votes
78
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top