ಸೀದ ಬಂಧ
ರಚನೆ : ತೇಜಾವತಿ ಎಚ್ ಡಿ
----------------------------------
ವಿಶಾಲ ಹಾಜರಾದಲ್ಲೂ ಆಪ್ತತೆಯ ಸುಳಿವಿಲ್ಲದ ಈ ಜಡ ನಸುಕಿನ ಸಂಧಿಯಲ್ಲಿ ಮನೆಯೊಂದು ಛಿದ್ರವಾಗಿ ಇಕ್ಕಟ್ಟಿನ ಗೋಡೆಯೊಳಗೆ ಉಸಿರುಗತ್ತಿಸುತ್ತಿದ್ದ ಆ ಕನಸುಗಳು ನುಸಿದಾಡುತ್ತಿವೆ ಕುಂಬಾರ ಒಲೆಯ ಮೂರು ಕುಪ್ಪುಗಳ ಮೇಲೆ ಹದಮರೆತ ಸಂಬಂಧಗಳುಕ್ಕಿ, ಒತ್ತಿ ತಳಹಿಡಿದು ಪ್ರೇಮದ ಪತ್ರೆಯನ್ನೇ ಸೀಯಿಸಿವೆ ಮನದೊಳಗಿನ ಕೆಂಡ ಬೂದಿ ಮುಚ್ಚಿಕೊಂಡು ಬಾಯಿಗೆ ಕಾದ ಹಂಚನ್ನಿಟ್ಟುಕೊಂಡು ತಾನೂ ನಿದ್ರಿಸುತ್ತಿದೆ ನಾಳೆಯ ನೆಮ್ಮದಿಗಾಗಿ ಕೂಗುವ ಕೋಳಿ, ಕೆನೆಯುವ ಟಗರು ಚಿಲಿಪಿಲಿಗುಡುವ ಹಕ್ಕಿಗಳು, ಹರಿಯುವ ಝರಿ ಮೂಡಣದ ಕಿರಣ ಚಲಿಸಲು ಸಜ್ಜಾಗಿವೆ ಬೆಳಕಿನ ಸೂಚಕವಾಗಿ
----------------------------------
ನೋಂದಣಿ ಐಡಿ : KPFS2-9945